
ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣವನ್ನು NIA ತನಿಖೆಗೆವಹಿಸುವಂತೆಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ/
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ, ಸೆಪ್ಟೆಂಬರ್ 01 ರಂದು ಧರ್ಮಸ್ಥಳ ಚಲೋ ನಡೆಸಲಾಗುವುದು ಎಂದರು. ಎಲ್ಲಾ ಜಿಲ್ಲೆಗಳಿಂದ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸುತ್ತಾರೆ. ರಾಜ್ಯದ ಎಲ್ಲ ಹಿಂದೂಪರ ಸಂಘಟನೆಗಳು, ಭಾಗವಹಿಸುತ್ತಾರೆ. ಈ ಧರ್ಮಯುದ್ಧ ಜ್ಯಾತ್ಯಾತೀತ ವಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವದಿಲ್ಲ. ಧರ್ಮಸ್ಥಳ ವಿಚಾರದಲ್ಲಿ ಯಾವುದೇ ಹುಡುಗಾಟಿಕೆ ಮಾಡಬಾರದು ಎಂದು ಸುಮ್ಮನೆ ಇದ್ದು, ಆದ್ರೆ ಈಗ ಸುಮ್ಮನೆ ಕೂಡಲು ಆಗುವದಿಲ್ಲ . ನಾನು ಮಂಜುನಾಥ ಸ್ವಾಮಿ ಅವರ ಬಳಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೆ ಗೋಪಾಲಯ್ಯ, ಶಾಸಕ ವಿಶ್ವನಾಥ, ಮಾಜಿ ಶಾಸಕರಾದ ಪ್ರೀತಂಗೌಡ, ನಾರಾಯಣಸ್ವಾಮಿ, ಮುಖಂಡ ತಮ್ಮೇಶಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.