*ಗೋಗಟೆ ಕಾಲೇಜಿನಲ್ಲಿ ಇನ್ಫೋಸಿಸ್ ಫಿನಿಶಿಂಗ್ ಸ್ಕೂಲ್ ಫಾರ್ ಎಂಪ್ಲಾಯಬಿಲಿಟಿ ಆನ್ ಪೈಥನ್ ವೆಬ್ ಡೆವಲಪರ್ ಕಾರ್ಯಾಗಾರ ಆಯೋಜನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ KLS ಗೋಗಟೆ ಇನ್ಸ್ಟಿಟ್ಯೂಟ್ ಆಫ ಟೆಕ್ನಾಲಜಿಯ ಐಆರ್ಡಿಸಿ ಸೆಲ್ ವತಿಯಿಂದ ಹಾಗೂ ಐಸಿಟಿ ಅಕಾಡೆಮಿಯ ಸಹಯೋಗದಲ್ಲಿ “ಇನ್ಫೋಸಿಸ ಫಿನಿಶಿಂಗ್ ಸ್ಕೂಲ್ ಫಾರ್ ಎಂಪ್ಲಾಯಬಿಲಿಟಿ ಆನ್ ಪೈಥನ್ ವೆಬ್ ಡೆವಲಪರ್” ಎಂಬ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿವಿಧ ಇಂಜಿನಿಯರಿಂಗ ಶಾಖೆಗಳ 60 ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು. ಐಟಿ ಕ್ಷೇತ್ರದಲ್ಲಿ ಉದ್ಯೋಗ ಸಾಧನೆಗಾಗಿ ಅಗತ್ಯವಾದ ತಾಂತ್ರಿಕ ಕೌಶಲ್ಯ ಹಾಗೂ ಉದ್ಯೋಗಾವಕಾಶಗಳನ್ನು ವಿಸ್ತರಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಪೈಥನ್ ಪ್ರೋಗ್ರಾಮಿಂಗ್, ವೆಬ್ ಡೆವಲಪ್ಮೆಂಟ್ ಫ್ರೇಮ್ವರ್ಕ್ಗಳು ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳ ಮೇಲೆ ವಿಶೇಷ ಒತ್ತು ನೀಡಲಾಯಿತು.
ಈ ತರಬೇತಿ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಜ್ಞಾನ ಮತ್ತು ಕೈಗಾರಿಕಾ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಯಿತು. ಐಸಿಟಿ ಅಕಾಡೆಮಿಯ ಪ್ರಮಾಣಿತ ತರಬೇತುದಾರರು ಹಾಗೂ ಇನ್ಫೋಸಿಸನ ಸಹಕಾರದಿಂದ ಸತ್ರಗಳನ್ನು ನಡೆಸಲಾಯಿತು. ಇದರಲ್ಲಿ ಸೈಧಾಂತಿಕ ಜ್ಞಾನ ಮಾತ್ರವಲ್ಲದೆ ಪ್ರಾಯೋಗಿಕ ಅಭ್ಯಾಸ ಹಾಗೂ ಪ್ರಾಜೆಕ್ಟ್ ಆಧಾರಿತ ಅಧ್ಯಯನಕ್ಕೂ ಪ್ರಾಮುಖ್ಯತೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ನೈಜ ಕಾರ್ಯಪ್ರಯೋಗಗಳಲ್ಲಿ ಬಳಸುವ ಅಪ್ಲಿಕೇಶನ್ಗಳು, ಕೋಡಿಂಗ ವಿಧಾನಗಳು ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಸಂಪಾದಿಸುವ ಅಮೂಲ್ಯ ಅವಕಾಶ ದೊರಕಿತು.
ಸಂಸ್ಥೆಯ ವ್ಯವಸ್ಥಾಪನಾ ಮಂಡಳಿಯವರು ಇನ್ಫೋಸಿಸ, ಐಸಿಟಿ ಅಕಾಡೆಮಿ ಹಾಗೂ ಐಆರ್ಡಿಸಿ ಸೆಲ ಗಳ ಸಹಕಾರಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು ಮತ್ತು ವಿದ್ಯಾರ್ಥಿಗಳಿಗೆ ಅತಿ ಆಧುನಿಕ ಕೌಶಲ್ಯಗಳನ್ನು ನೀಡಿ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಪ್ರಯತ್ನದ ಶ್ಲಾಘನೆ ಮಾಡಿದರು. ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆಯಲ್ಲಿ ಕೈಗಾರಿಕಾ-ಶೈಕ್ಷಣಿಕ ಸಹಕಾರ ಮತ್ತು ವಿದ್ಯಾರ್ಥಿ ಕೌಶಲ್ಯಾಭಿವೃದ್ಧಿಯ ದಾರಿಗೆ ಮತ್ತೊಂದು ಮೈಲುಗಲ್ಲಾಗಿ ಪರಿಣಮಿಸಿದೆ.
ಈ ಸಂದರ್ಭದಲ್ಲಿ ಕೆ.ಎಲ್.ಎಸ. ವ್ಯವಸ್ಥಾಪನಾ ಮಂಡಳಿ, ಪ್ರಾಚಾರ್ಯ ಡಾ. ಎಂ. ಎಸ. ಪಾಟೀಲ, ಐಆರ್ಡಿಸಿ ಡೀನ ಡಾ. ಶ್ವೇತಾ ಗೌಡರ, ಅಕಾಡೆಮಿಕ್ಸ್ ಡೀನ ಡಾ. ಅರುಣ ಕುಮಾರ ಪಿ. ಅವರು ಕಾರ್ಯಕ್ರಮದ ಯಶಸ್ವೀ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಡಾ. ಆರ. ಎಸ. ಪಾಟೀಲ, ಡಾ. ಕವಿತಾ ಡಿ. ಹಣಬರಟ್ಟಿ ಹಾಗೂ ಪ್ರೊ. ಸ್ನೇಹಲ ಕೆ. ಅವರು ಸಂಯೋಜಿಸಿದರು.