

ಪ್ರಗತಿವಾಹಿನಿ ಸುದ್ದಿ: ಪತಿಯ ವರಕ್ಷಿಣೆ ಕಿರುಕುಳಕ್ಕೆ ಬೇಸತ್ತು ಟೆಕ್ಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಗುಂಟೆಪಾಳ್ಯದಲ್ಲಿ ನಡೆದಿದೆ.
ಶಿಲ್ಪಾ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಶಿಲ್ಪಾ ಮೂರು ವರ್ಷಗಳ ಹಿಂದೆ ಪ್ರವೀಣ್ ಎಂಬಾತನನ್ನು ವಿವಾಹವಾಗಿದ್ದರು. ಕಳೆದ ಒಂದು ವರ್ಷದಿಂದ ಪತಿ ಪ್ರವೀಣ್ ಕೆಲಸ ಬಿಟ್ಟಿದ್ದ. ತನ್ನದೇ ಸ್ವಂತ ಉದ್ಯೋಗ ಮಾಡುವುದಾಗಿ ಹೇಳಿ ಪತ್ನಿಗೆ ತವರಿನಿಂದ ಹಣತರುವಂತೆ ಕಿರುಕುಳ ನೀಡುತ್ತಿದ್ದ.
ಗರ್ಭಿಣಿಯಾಗಿದ್ದ ಶಿಲ್ಪಾಳಿಗೆ ಹಿಂಸಿಸುವುದು, ಸಣ್ಣಪುಟ್ಟ ವಿಚಾರಕ್ಕೂ ಜಗಳ ಮಾಡಿ ಕಿರುಕುಳ ನೀಡುವುದು. ವರದಕ್ಷಿಣೆ ತರುವಂತೆ ಪೀಡಿಸುವುದು ಮಾಡುತ್ತಿದ್ದ. ಇದೀಗ ಏಕಾಏಕಿ ಶಿಲ್ಪಾ ಮನೆಯಲ್ಲಿಯೇ ಸಾವನ್ನಪ್ಪಿದ್ದಾಳೆ. ಶಿಲ್ಪಾ ಪೋಷಕರು ವರದಕ್ಷಿಣೆ ಕಿರುಕುಳ ನೀಡಿ ಪತಿಯೇ ಕೊಲೆ ಮಾಡಿ ಆತ್ಮಹತ್ಯೆ ಎಂದು ನಾಟಕವಾಡುತ್ತಿದ್ದಾನೆ ಎಂದು ದೂರು ನೀಡಿದ್ದಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಿಲ್ಪಾ ಪತಿಯನ್ನು ಬಂಧಿಸಿದ್ದಾರೆ.