ಪ್ರಗತಿವಾಹಿನಿ ಸುದ್ದಿ, ತಮಿಳುನಾಡು
ಚೆನ್ನೈ (ತಮಿಳುನಾಡು): ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಹೆಡ್ ಕಾನ್ಸ್ಟೆಬಲ್ ದೆಹಲಿ ಜೈಲಿನಲ್ಲಿ ಮರಣದಂಡನೆಕಾರನಾಗಿ ಸೇವೆ ಸಲ್ಲಿಸಲು ತಿಹಾರ್ ಜೈಲಿನ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ನಿರ್ಭಯಾ ಪ್ರಕರಣದ ದೋಷಿಗಳನ್ನು ಗಲ್ಲಿಗೇರಿಸಲು ಅವಕಾಶ ನೀಡುವಂತೆ ತಮಿಳುನಾಡಿನ ಪೊಲೀಸ್ ಹೆಡ್ ಕಾನ್ಸ್ಟೆಬಲ್ ದೆಹಲಿಯ ತಿಹಾರ್ ಜೈಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಎಸ್ ಸುಭಾಷ್ ಶ್ರೀನಿವಾಸನ್ ಮುಖ್ಯ ಕಾನ್ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಪರಾಧಿಗಳ ಮರಣದಂಡನೆಗೆ ಅಥವಾ ಗಲ್ಲಿಗೇರಿಸುವ ವ್ಯಕ್ತಿ ಇಲ್ಲ ಎಂದಿದ್ದ ತಿಹಾರ್ ಜೈಲಿನ ಸುದ್ದಿಯನ್ನು ಸುಭಾಷ್ ಶ್ರೀನಿವಾಸನ್ ಪತ್ರಿಕೆಗಳಲ್ಲಿ ನೋಡಿದ್ದಾರೆ. ಆ ನಂತರ ಈ ನಿರ್ಧಾರಕ್ಕೆ ಬಂದ ತಮಿಳುನಾಡು ಹೆಡ್ ಕಾನ್ಸ್ಟೆಬಲ್ ಬರೆದ ಪತ್ರದಲ್ಲಿ, ಕೆಲಸವು ತುಂಬಾ ಮಹತ್ವದ್ದಾಗಿರುವುದರಿಂದ ಅಪರಾಧಿಗಳನ್ನು ಗಲ್ಲಿಗೇರಿಸುವ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸುಭಾಷ್ ಶ್ರೀನಿವಾಸನ್ ಅನಾಥ ಶವಗಳನ್ನು ಅಂತ್ಯ ಸಂಸ್ಕಾರ ಮಾಡುವುದು, ಬಡವರಿಗೆ ಶುದ್ಧ ನೀರನ್ನು ಒದಗಿಸುವ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಇದೀಗ ತಿಹಾರ್ ಜೈಲಿನಲ್ಲಿ ನಾನು ಮಾಡುವ ಗಲ್ಲಿಗೇರಿಸುವ ಕೆಲಸಕ್ಕೆ ಯಾವುದೇ ಸಂಭಾವನೆ ಬೇಡವೆಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ