*5 ಲಕ್ಷ ರೂ. ಪರಿಹಾರ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಕೆಲಸದ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದ ಯುವಕನ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಪರಿಹಾರ ವಿತರಿಸಿದರು.
ತುಮ್ಮರಗುದ್ದಿ ಗ್ರಾಮದ ಲಕ್ಷ್ಮಣ ಕೆಂಪದಿನ್ನಿ ಇವರ ಮಗ ಸಾಯಿನಾಥ್ ಕೆಲವು ದಿನಗಳ ಹಿಂದೆ ಗುತ್ತಿಗೆ ಆಧಾರದ ಮೇಲೆ ವಿದ್ಯುತ್ ಕೆಲಸಕ್ಕೆ ತೆರಳಿದ ವೇಳೆ ವಿದ್ಯುತ್ ತಂತಿ ಪ್ರವಹಿಸಿ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂ,ಗಳ ಚೆಕ್ ನ್ನು ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಈ ವೇಳೆ ಶೇಖರ್ ಹೊಸೂರಿ, ಶಂಕರಗೌಡ ಪಾಟೀಲ, ಕಲ್ಲಪ್ಪ ಸುತಗಟ್ಟಿ, ಬಾಳಪ್ಪ ಸಿನಗಿ, ಸತ್ಯಪ್ಪ ನಂದ್ಯಾಗೋಳ, ಬಸುನಿ ಪಾಟೀಲ, ವಿಲ್ಸನ್ ಮಹಾರ್, ಮಲ್ಲಪ್ಪ ಗೋಸಾವಿ, ಶೇಖರ್ ಸಿನಗಿ, ಶಿವಾಜಿ ತಳವಾರ್, ಬಾಳಪ್ಪ ಯದ್ದಲಗುಡ್ಡ ಇದ್ದರು.
ಸಹಾಯ ಧನ

ಕರಿಕಟ್ಟಿ ಗ್ರಾಮದ ಯಲ್ಲಪ್ಪ ಬೋರಿಮರದ ಇವರ ಮಗನಾದ ಸಚಿನ ಬೋರಿಮರದ ರಸ್ತೆ ಅಪಘಾತದಲ್ಲಿ ಈಚೆಗೆ ನಿಧನರಾದ ಹಿನ್ನೆಲೆಯಲ್ಲಿ ಮೃತರ ಮನೆಗೆ ಗುರುವಾರ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆರ್ಥಿಕ ಸಹಾಯ ಮಾಡಿದರು.
ಆರ್ಥಿಕ ನೆರವು ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಿದ್ದನಹಳ್ಳಿ ಗ್ರಾಮದ ಕಾರ್ಯಕರ್ತರಾದ ಬಸಪ್ಪ ಸುಲಧಾಳ ಇವರ ಮಗನಾದ ಬಾಳಕೃಷ್ಣ ಸುಲಧಾಳ ರಸ್ತೆ ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆರ್ಥಿಕ ಸಹಾಯ ನೀಡಿದರು.