Belagavi NewsBelgaum NewsKannada NewsKarnataka News
*ಲೋಕಾಯುಕ್ತ ಬಲೆಗೆ ಬಿದ್ದ ಬೆಳಗಾವಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಪ್ತಿಯಾಗಿದ್ದ ಮರಳನ್ನು ಸಾಗಾಟ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಫಯಾಜ್ ಅಹ್ಮದ್ ಶೇಖ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಜಪ್ತಿ ಮಾಡಲಾಗಿದ್ದ ಮರಳು ಬಳಕೆಗೆ ಗುತ್ತಿಗೆದಾರನಿಗೆ ಟಾಸ್ಕ್ ಫೋರ್ಸ ಸಮೀತಿಯ ಸದಸ್ಯರ ಬೆಲೆ ನಿಗದಿ ಮಾಡಿ ವಿಲೇವಾರಿ ಆದೇಶ ನೀಡಲು ಅಧಿಕಾರಿ ಫಯಾಜ್ ಅಹ್ಮದ್ ಶೇಖ್ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಅಥಣಿ ತಾಲೂಕಿನ ಶೀತಲ ಸನದಿ ಎಂಬುವವರು ಲೋಕಾಯುಕ್ತ ಕಚೇರಿಗೆ ನೀಡಿದ್ದ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲು ಗುತ್ತಿಗೆದಾರ ಬಿ. ಕೆ ಮಗದುಮ್ಮ ಎಂಬುವವರಿಗೆ ಲಂಚಕ್ಕೆ ಬೇಡಿಕೆ ಇಡಲಾಗಿತ್ತು.