*ಕೆಪಿಟಿಸಿಎಲ್- ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಅಯ್ಕೆ ಪಟ್ಟಿ ಪ್ರಕಟ*

ಪ್ರಗತಿವಾಹಿನಿ ಸುದ್ದಿ: ಕವಿಪ್ರನಿನಿಯು ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದು, ವಿವಿಧ ಹುದ್ದೆಗಳ ನೇಮಕಾತಿಯ ಅಂತಿಮ ಅಯ್ಕೆ ಪಟ್ಟಿ ಪ್ರಕಟಿಸಿದೆ.
ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ನಿರ್ದೇಶನದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. 2024 ರ ಅಕ್ಟೋಬರ್ ನಲ್ಲಿ 433 ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆ ಮತ್ತು 90 ಕಿರಿಯ ಪವರ್‌ಮ್ಯಾನ್ ಹುದ್ದೆ ಸೇರಿದಂತೆ ಒಟ್ಟು 523 ನಿರ್ವಹಣಾ ಪದವೃಂದದ ಹುದ್ದೆಗಳ ನೇಮಕಾತಿಗೆ ಕೆಪಿಟಿಸಿಎಲ್ ಅಧಿಸೂಚನೆ ಹೊರಡಿಸಿತ್ತು. ಮೇ 2025ರಲ್ಲಿ ರಾಜ್ಯದ ವಿವಿದೆಡೆ ಸಹನ ಶಕ್ತಿ ಪರೀಕ್ಷೆ ನಡೆಸಲಾಗಿತ್ತು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ಅಂತಿಮವಾಗಿ ಕಿರಿಯ ಸ್ಟೆಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಆಯ್ಕೆಗೊಂಡ 491 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಪ್ರಕಟಿಸಿತ್ತು. ಅಭ್ಯರ್ಥಿಗಳಿಂದ ನಿಗದಿತ ಸಮಯದಲ್ಲಿ ಬಂದ ಆಕ್ಷೇಪಣೆಗಳನ್ನು ಪರೀಶಿಲಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಆಗಸ್ಟ್ 2025 ರಲ್ಲಿ ತನ್ನ ಅಧಿಕೃತ ವೆಬ್‌ಸೈಟ್‍ನಲ್ಲಿ ಪ್ರಕಟಿಸಿದ್ದು, htpps://kptcl.karnataka.gov.in/recruitment ಜಾಲತಾಣದಲ್ಲಿ ಆಯ್ಕೆ ಪಟ್ಟಿ ಲಭ್ಯವಿದೆ.
ರಾಜ್ಯದಾದ್ಯಂತ ಕೆಪಿಟಿಸಿಎಲ್ ಉದ್ಯೋಗದ ಭರವಸೆಯಲ್ಲಿದ್ದ 2600 ಕ್ಕೂ ಹೆಚ್ಚು ಅಭ್ಯರ್ಥಿಗಳು ಮೇ ತಿಂಗಳಿನಲ್ಲಿ ನಡೆದಿದ್ದ ಸಹನ ಶಕ್ತಿ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇದಾದ ಎರಡು ತಿಂಗಳಲ್ಲೇ ನಿಗಮ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಇಂಧನ ಇಲಾಖೆಯು ಉದ್ಯೋಗದ ಗ್ಯಾರಂಟಿ ನೀಡಿದೆ.
ಉಳಿದಂತೆ, ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕೈಗೊಳ್ಳಲಾಗಿರುವ ಕಿರಿಯ ಪವರ್‌ಮ್ಯಾನ್ ಹುದ್ದೆಯ ನೇಮಕಾತಿಗೆ ಆಯ್ಕೆ ಪಟ್ಟಿಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.
KPTCL – Final Selection List of Junior Station Attendant & Junior Powerman posts released
Good news for the aspirants awaiting the selection lists of Junior Station Attendant and Junior Powerman posts: KPTCL has officially released the final list of selected candidates for these posts.
The recruitment process for the posts of Junior Station Attendant and Junior Powerman was conducted as per the directions of Energy Minister K. J. George. In October 2024, KPTCL had released a notification for the recruitment of 523 maintenance cadre posts, including 433 junior station attendant posts and 90 junior powerman posts. The endurance test was conducted in May 2025 across the state.
The corporation had finally published the Provisional Selection Lists of 491 candidates selected along with cut-off marks. After reviewing the objections submitted by candidates within the specified timeframe, the Final Selectin List was published in August 2025 and announced on the https://kptcl.karnataka.gov.in/recruitment website.
More than 2600 candidates, who were hoping for KPTCL jobs across the state, had appeared for the endurance test held in May-2025. Within two months, the corporation announced the final selection list and the Energy Department has given a job guarantee to those job aspirants.
The selection lists for the post of Junior Powerman in various ESCOMs will be announced shortly.