
ಪ್ರಗತಿವಾಹಿನಿ ಸುದ್ದಿ: ವಸತಿ ಶಾಲೆಯ ಹಾಸ್ಟೆಲ್ ನ ಶೌಚಾಲಯದಲ್ಲಿ ವಿದ್ಯಾರ್ಥಿನಿ ಹೆರಿಗೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.
ಪರಮಣ್ಣ (30) ಬಂಧಿತ ಆರೋಪಿ. ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನೇ ವಿದ್ಯಾರ್ಥಿನಿ ಗರ್ಭಿಣಿಯಾಗಲು ಕಾರಣನಾಗಿದ್ದು, ಸುರಪುರ ತಾಲೂಕಿನ ಕಕ್ಕೇರ ಗ್ರಾಮದವನು ಎಂದು ತಿಳಿದುಬಂದಿದೆ.
ಅಪ್ರಾಪ್ತ ಬಾಲಕಿ ಜೊತೆ ಸಂಬಂಧ ಬೆಳೆಸಿ ನಿರಂತರ ಸಂಪರ್ಕದಲ್ಲಿದ್ದ. ಪರಿಣಾಮ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಲ್ಲದೇ, ಹಾಸ್ಟೆಲ್ ನಲ್ಲಿಯೇ ಹೆರಿಗೆಯಾಗಿದ್ದಳು. ಹಾಸ್ಟೆಲ್ ವಾರ್ಡನ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗ ಆರೋಪಿ ಪರಮಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.