
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಆಕಾರ ಪೌಂಡ್ರಿಸ್ ಎಂಬ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದ ಯುವಕರು ಕಂಪನಿಯ ಸೂಪರವೈಸರ್ ಕೇಳಿದ ಶಿಫ್ಟ್ ಕೊಡದಿದಕ್ಕೆ ಸೂಪರವೈಸರ್ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದು, ಮೂವರನ್ನು ಉದ್ಯಮಬಾಗ ಪೊಲೀಸರು ಬಂಧಿಸಿದ್ದಾರೆ.
ರಾಜೇಂದ್ರ ಕುಮಾರ ಬಾರಿಕ ಹಾಗೂ ಸತ್ಯರಂಜನ ಬೆಹರಾ ಉದ್ಯಮಬಾಗದಲ್ಲಿರುವ ಆಕಾರ ಪೌಂಡ್ರಿಸ್ ಎಂಬ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ಗಜಾನನ ನಗರದಲ್ಲಿ ಅಪರಿಚಿತ ಇಬ್ಬರು ವ್ಯಕ್ತಿಗಳು ನಮ್ಮಿಬ್ಬರನ್ನು ಕೊಲ್ಲುವ ಉದ್ದೇಶದಿಂದ ತಮ್ಮ ಕೈಯಲ್ಲಿದ್ದ ಕಬ್ಬಿಣದ ರಾಡನಿಂದ ಹಲ್ಲೆ ಮಾಡಿ ಗೆಳೆಯನಾದ ಸತ್ಯರಂಜನ ಬೆಹರಾ ಈತನ ತಲೆಗೆ ಹಲ್ಲೆ ಮಾಡಿದ್ದಾರೆ. ಬಲವಾಗಿ ಪೆಟ್ಟು ಆಗಿದೆ ಎಂದು ರಾಜೇಂದ್ರ ಕುಮಾರ ಬಾರಿಕ ದೂರು ನೀಡಿದರು.
ಈ ಹಿನ್ನೆಲೆಯಲ್ಲಿ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ: 48/2025 ಕಲಂ 126(2), 109. 352. 351(3) ಸಹ ಕಲಂ 3(5)ಬಿ.ಎನ್.ಎಸ್ -2023 ದಾಖಲು ಮಾಡಿ ತನಿಖೆ ನಡೆಸಲಾಗಿದೆ.
ತನಿಖೆ ನಡೆಸಿದ ಪೊಲೀಸರು, ಪ್ರಜ್ವಲ ಆನಂದ ಪಾಟೀಲ, ಮಯೂರ ಕೃಷ್ಣಾ ಗುರವ ಹಾಗೂ ವಿಶಾಲ ವಸಂತ ಅಲ್ಲೋಳಕರ ಎಂಬುವದನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಕಬ್ಬಿಣದ ರಾಡನ್ನು ವಶಕ್ಕೆ ಪಡೆಯಲಾಗಿದೆ.
ಈ ವಿಶೇಷ ತಂಡದಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಟಿ. ಬಿ. ಕುಂಚನೂರ, ಆನಂದ ಖೋತ ಎಚ್. ವಾಯ್. ವಿಭೂತಿ, ಈರಣ್ಣ ಚವಲಗಿ ಇವರ ಕಾರ್ಯವನ್ನು ಪೊಲೀಸ ಆಯುಕ್ತರು ಶ್ಲಾಘಿಸಿದ್ದಾರೆ.