*ಕಿಚ್ಚ ಸುದೀಪ್ ಗೆ ಹುಟ್ಟುಹಬ್ಬದ ಸಂಭ್ರಮ: ದುಬಾರಿ ಗಿಪ್ಟ್ ನೀಡಿದ ಸಲ್ಲು*

ಪ್ರಗತಿವಾಹಿನಿ ಸುದ್ದಿ: ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟು ಹಬ್ಬದ ಸಂದರ್ಭ. ಅವರ ಅಭಿಮಾನಿಗಳಲ್ಲೂ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸುದೀಪ್ ಅವರಿಗೆ ಈಗ 52 ವರ್ಷ. ಈ ಸಂದರ್ಭಕ್ಕೆ ಸಲ್ಮಾನ್ ಖಾನ್ ಅವರು ದುಬಾರಿ ಗಿಫ್ಟ್ ಕಿಚ್ಚನಿಗೆ ನೀಡಿದ್ದಾರೆ.
ಸುದೀಪ್ ಅವರು ಜಿಮ್ ಫ್ರೀಕ್. ನಿತ್ಯ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಈ ಕಾರಣಕ್ಕೆ ಈ ಹುಟ್ಟು ಹಬ್ಬಕ್ಕೆ ಕೋಟ್ಯಂತರ ರೂಪಾಯಿ ಬೆಲೆ ಬಾಳೋ ಜಿಮ್ ಸೆಟ್ಗಳನ್ನು ಸಲ್ಮಾನ್ ಖಾನ್ ಅವರು ಸುದೀಪ್ಗೆ ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ.
ಸುದೀಪ್ ಅವರಿಗೆ ಬಾಲಿವುಡ್ ಹೊಸದಲ್ಲ. 2008ರಲ್ಲಿ ರಿಲೀಸ್ ಆದ ‘ಫೂಂಕ್’ ಚಿತ್ರದ ಮೂಲಕ ಅವರು ಬಾಲಿವುಡ್ ಪ್ರವೇಶಿಸಿದರು. ಸಲ್ಮಾನ್ ಖಾನ್ ಅವರ ‘ದಬಂಗ್ 3’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದರು. ಇದರಿಂದ ಸುದೀಪ್ ಹಾಗೂ ಸಲ್ಲು ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು.
ಸುದೀಪ್ ಕಾರು ಪ್ರಿಯರು. ಅವರ ಬಳಿ ವಿಶೇಷ ಕಾರುಗಳ ಸಂಗ್ರಹ ಇದೆ. ಅವರಿಗೆ ಸಲ್ಲು ಬಿಎಂಡಬ್ಲ್ಯೂ ಎಂ 5 ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಆ ಸಮಯದಲ್ಲಿ ಈ ಕಾರಿನ ಬೆಲೆ 1.7 ಕೋಟಿ ರೂಪಾಯಿ ಇದ್ದವು ಎನ್ನಲಾಗಿದೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು.