*ಕುಡಚಿಯಲ್ಲಿ ಯಶಸ್ವಿಯಾಗಿ ನಡೆದ ಆಚಾರ್ಯ ಶ್ರೀ ಶಾಂತಿಸಾಗರ ಸಂಸ್ಕಾರ ಬಂಧನ ಶಿಬಿರ*

ಪ್ರಗತಿವಾಹಿನಿ ಸುದ್ದಿ: ನಗರದಲ್ಲಿ ಜೈನ ಯುವ ಸಂಘಟನೆ 8 ದಿನ ಆಯೋಜಿಸಿರುವ ಆಚಾರ್ಯ ಶ್ರೀ ಶಾಂತಿಸಾಗರ ಸಂಸ್ಕಾರ ಬಂಧನ ಶಿಬಿರ ಇದೇ ಪ್ರಥಮ ಬಾರಿಗೆ ಕುಡಚಿ ಗ್ರಾಮಕ್ಕೆ ಪದಾರ್ಪಣೆ ಮಾಡಿತು.
ಕುಡುಚಿಯಲ್ಲಿ ನಡೆದ ಇಂದಿನ ಶಿಬಿರದಲ್ಲಿ 1000 ಕ್ಕು ಹೆಚ್ಚು ಜನರು ಭಾಗವಹಿಸಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಬೆಳಗಾವಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ಶಿಬಿರ ಉದ್ಘಾಟನೆ ಮಾಡಿದರು ಹಾಗೂ ಶ್ರೀ ಶಾಂತಿನಾಥ್ ದಿಗಂಬರ ಜೈನ ಮಂದಿರದ ಟ್ರಸ್ಟಿಗಳಾದ ಮಹೇಂದ್ರ ಪಾಟೀಲ್ ಶೀತಲ್ ಪಾಟೀಲ್ ಶರತ್ ಪಾಟೀಲ್ ಮಹಾವೀರ್ ಪಾಟೀಲ್ ನಗರ ಸೇವಕರಾದ ಬಸವರಾಜ್ ಮುದುಗೆ ಕರ್ ಶ್ರೀಯುಷ್ ಪಾಟೀಲ್ ಸುನಿಲ್ ಪಾಟೀಲ್ ಹಾಗೂ ಮಹಿಳಾ ಮಂಡಳ ಯುವಕ ಮಂಡಲ ಹಾಗೂ ಬಾಲಿಕಾ ಮಂಡಲ ಸುತ್ತ ಮುತ್ತಲಿನ ಹಳ್ಳಿ ಜನರು ಶ್ರಾವಕಸ್ರಾವಕಿಯರು ಹಾಗೂ ಜೈನ್ ಯುವ ಸಂಘಟನಾ ಬೆಳಗಾವಿಯ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಾಳಿನ ಶಾಂತಿಸಾಗರ ಶಿಬಿರ ಬಸ್ತವಾಡ ಗ್ರಾಮದಲ್ಲಿ ಜರುಗಲಿದೆ ಸಮಸ್ತ ಎಲ್ಲ ಜೈನ ಶ್ರಾವಕ ಶ್ರಾವಕಿಯರಿಗೆ ಬಾಲಿಕಾ ಮಂಡಳ ಯುವಕ ಮಂಡಳಗಳಿಗೆ ಜೈನ ಯುವ ಸಂಘಟನೆ ವತಿಯಿಂದ ಕರೆಯಲಾಗಿದೆ.