*ನಾಪತ್ತೆ ಆಗಿದ್ದ ಬಾಲಕರನ್ನು 24 ಗಂಟೆಯಲ್ಲಿ ಪತ್ತೆ ಹಚ್ಚಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣಪತಿ ನೋಡಲು ಹೋಗುತ್ತೇವೆ ಎಂದು ನಾಪತ್ತೆ ಆಗಿದ್ದ ಇಬ್ಬರು ಬಾಲಕರು ಬೆಳಗಾವಿಯ ಉದ್ಯಮಬಾಗ ಪೊಲೀಸರು ತ್ವರಿತವಾಗಿ ಪತ್ತೆ ಹಚ್ಚಿದ್ದು, ಬಾಲಕರ ಪೊಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಅನಗೋಳದ ಶಿವಶಕ್ತಿ ನಗರದ ನಿವಾಸಿ ಶಂಕರ ಬೀರಜೀತ ಪರಿಯಾರ, ತನ್ನ ಇಬ್ಬರು ಅಪ್ರಾಪ್ತ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಕ್ಕಳಾದ ಅನಮೋಲ ಶಂಕರ ಪರಿಯಾರ (10) ಹಾಗೂ ಸಹೋದರನ ಮಗ ಕಾರ್ತಿಕ ಅರ್ಜುನ ಪರಿಯಾರ (8) ನಿನ್ನೆ ಮದ್ಯಾಹ್ನ 12 ಗಂಟೆಗೆ ಮನೆಯಿಂದ ಶಿವಶಕ್ತಿ ನಗರದಲ್ಲಿರುವ ಗಣಪತಿ ನೋಡಲು ಹೊದವರು ವಾಪಸ್ ಆಗಿಲ್ಲ ಎಂದು ದೂರು ನೀಡಿದ್ದರು.
ಕಾಣೆಯಾದ ಮಕ್ಕಳ ಪತ್ತೆಗಾಗಿ ಉದ್ಯಮಬಾಗ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣ ದಾಖಲಾದ 24 ಗಂಟೆಯಲ್ಲಿ ಇಬ್ಬರು ಮಕ್ಕಳನ್ನು ಪೊಲೀಸರು ಪತ್ತೆಮಾಡಿದ್ದಾರೆ. ಮಕ್ಕಳು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾರೆ.
ಕಾಣೆಯಾದ ಅಪ್ರಾಪ್ತ ಬಾಲಕರನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚುವಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಟಿ. ಬಿ. ಕುಂಚನೂರ ಸಿಎಚ್‌ಸಿ, ಆನಂದ ಖೋತ, ಎಚ್. ವಾಯ್. ವಿಭೂತಿ ಸಿಪಿಸಿ ಹಾಗೂ ಈ ತಂಡಕ್ಕೆ ಸಹಾಯ ಮಾಡಿದ ಗಣೇಶ ಬಂದೂಬಸ್ತ ಕರ್ತವ್ಯಕ್ಕೆ ಬಂದಿರುವ ಹೋಮಗಾರ್ಡ ಮಾಯಪ್ಪ ಪಕ್ಕೀರಪ್ಪ ಸನದಿ ಹಾಗೂ ಲೋಟಸ್ ಆಸ್ಪತ್ರೆ ಹತ್ತಿರ ರಹವಾಸಿಯಾದ 12 ವರ್ಷದ ಬಾಲಕನಾದ ಚೇತನ ಶಿವಪ್ಪ ಕೊಮ್ಮನ್ನವರ ಇವರೆಲ್ಲರ ಕಾರ್ಯವೈಖರಿಯನ್ನು ಪೊಲೀಸ ಆಯುಕ್ತರು ಶ್ಲಾಘಿಸಿದ್ದಾರೆ.