*ನಮ್ಮನ್ನು ಉಳಿಸಿಕೊಳ್ಳಲು ನಮ್ಮ ಸರ್ಕಾರ ಇದೆ ಅನ್ನೊ ಮನಸ್ಥಿತಿಯಲ್ಲಿ ಅಲ್ಪಸಂಖ್ಯಾತರು ಇದ್ದಾರೆ: ಮಹೇಶ ಟೆಂಗಿನಕಾಯಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಸೀದಿ ಮೇಲೆ ನಿಂತು, ಕಲ್ಲು, ಚಪ್ಪಲಿ ಒಗೆಯಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಇದಕ್ಕೆಲ್ಲ ಅಲ್ಪಸಂಖ್ಯಾತರ ತುಷ್ಠೀಕರಣವೆ ಕಾರಣ ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ ಹೊರ ಹಾಕಿದರು.
ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ 2022ರಲ್ಲಿ ಗಲಬೆ ಆಯ್ತು. ಆಗ ಗಲಬೆಗೆ ಸಂಬಂಧಿಸಿದಂತೆ 60ಜನರನ್ನ ಬಂಧನ ಮಾಡಿದ್ದರು. ಪೊಲೀಸ್ ಠಾಣೆ ಧ್ವಂಸ ಮಾಡಿ, ಕಮಿಷನರ್ ಕಾರು ಸುಟ್ಟ ಆರೋಪಿಗಳ ಬಿಡುಗಡೆ ಮಾಡಿದ್ದು, ಮದ್ದೂರಿನಲ್ಲಿ ಘಟನೆಗೆ ಪ್ರೇರಣೆ ಆಗಿದೆ ಎಂದು ಆರೋಪಿಸಿದರು.
ನಾವು ಏನೇ ಮಾಡಿದ್ರೂ ಉಳಿಸಿಕೊಳ್ಳಲು ನಮ್ಮ ಸರ್ಕಾರ ಇದೆ ಅನೋ ಮನಸ್ಥಿತಿಯಲ್ಲಿ ಅಲ್ಪಸಂಖ್ಯಾತರು ಇದ್ದಾರೆ. ಏನೇ ಮಾಡಿದರೂ ದಕ್ಕಿಸುಕೊಳ್ಳಬಹುದು ಎಂಬ ಮನಸ್ಥಿತಿ ಅವರಲ್ಲಿ ಬಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿವೆ. ಈಗಲಾದರೂ ಗೃಹ ಸಚಿವರು ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ. ರಾಜ್ಯ ಇಂಟಲಿಜೆನ್ಸ್ ಇಲಾಖೆ, ಫೇಲ್ ಆಗಿದೆ.
ಭದ್ರವಾತಿಯಲ್ಲಿ ಪೊಲೀಸ ಇಲಾಖೆ ಯಾಕೆ ಇದನ್ನ ವಿಡಿಯೋ ಮಾಡಿಲ್ಲ. ಕೋಲಾರದಲ್ಲಿ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನ ಮಾಡಿದ್ರೂ ಯಾವುದೇ ಕ್ರಮವಾಗಿಲ್ಲ ಎಂದರು.