Belagavi NewsBelgaum NewsKannada NewsKarnataka News

*ಖಾನಾಪುರ ತಾಲ್ಲೂಕಿನ ಹನ್ನೊಂದು ಪಿಡಿಒಗಳ ವರ್ಗಾವಣೆ*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆರಂಭಿಸಿರುವ ಪಿಡಿಒಗಳ ಕಡ್ಡಾಯ ವರ್ಗಾವಣೆ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಪಂಗಳಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಒಟ್ಟು ಹನ್ನೊಂದು ಪಿಡಿಒಗಳು ಬೇರೆ ಗ್ರಾಪಂಗಳಿಗೆ ವರ್ಗಾವಣೆಗೊಂಡು ಆದೇಶ ಪಡೆದಿದ್ದಾರೆ. ಏಳು ಪಿಡಿಒಗಳು ತಾಲ್ಲೂಕಿನೊಳಗೆ ವರ್ಗಾವಣೆಗೊಂಡಿದ್ದು, ಐವರು ಪಿಡಿಒಗಳು ಹೊರಜಿಲ್ಲೆಗೆ ವರ್ಗಾವಣೆಗೊಂಡು ತೆರಳಲಿದ್ದಾರೆ.

ಪಿಡಿಒಗಳಾದ ಬಾಲರಾಜ ಭಜಂತ್ರಿ ಗಂದಿಗವಾಡ ಗ್ರಾಪಂ ನಿಂದ ನಾಗರಗಾಳಿ ಗ್ರಾಪಂಗೆ, ವೀರೇಶ ಸಜ್ಜನ ಪಾರವಾಡ ಗ್ರಾಪಂ ನಿಂದ ಇಟಗಿ ಗ್ರಾಪಂಗೆ, ಜ್ಯೋತಿಬಾ ಕಾಮಕರ ಗರ್ಲಗುಂಜಿ ಗ್ರಾಪಂ ನಿಂದ ಶಿಂಧೊಳ್ಳಿ ಗ್ರಾಪಂಗೆ, ಸುನೀಲ ಅಂಬಾರೆ ಕಣಕುಂಬಿ ಗ್ರಾಪಂನಿಂದ ಪಾರವಾಡ ಗ್ರಾಪಂಗೆ, ಪ್ರೀತಿ ಪತ್ತಾರ ಗುಂಜಿ ಗ್ರಾಪಂ ನಿಂದ ನೇರಸೆ ಗ್ರಾಪಂಗೆ, ಎಂ.ಎಂ ಮೊಖಾಶಿ ಅಮಟೆ ಗ್ರಾಪಂ ನಿಂದ ರಾಮಗುರವಾಡಿ ಗ್ರಾಪಂಗೆ ಮತ್ತು ಸಂಜೀವ ಉಪ್ಪೀನ ರಾಮಗುರವಾಡಿ ಗ್ರಾಪಂ ನಿಂದ ಶಿರೋಲಿ ಗ್ರಾಪಂಗೆ ವರ್ಗಾವಣೆಯ ಆದೇಶ ಪಡೆದಿದ್ದಾರೆ.

ವಿಕಲಚೇತನ, ವಿಶೇಷ ಮತ್ತು ಅನಾರೋಗ್ಯ ಪೀಡಿತ ಪಿಡಿಒಗಳ ಕೋಟಾದಡಿ ತೋಪಿನಕಟ್ಟಿ ಗ್ರಾಪಂ ಪಿಡಿಒ ಅಭಿಜಿತ್ ಹಾಸನ ಜಿಲ್ಲೆಗೆ, ಜಾಂಬೋಟಿ ಗ್ರಾಪಂ ಪಿಡಿಒ ಶ್ರೀದೇವಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ, ಕೇರವಾಡ ಗ್ರಾಪಂ ಪಿಡಿಒ ಸುಗೂರಪ್ಪ ರಾಯಚೂರು ಜಿಲ್ಲೆಗೆ ಮತ್ತು ಸಾಮಾನ್ಯ ಕೋಟಾದಡಿ ಕಕ್ಕೇರಿ ಗ್ರಾಪಂ ಪಿಡಿಒ ಎಸ್.ಎಂ ಬೊಂಗಾಳೆ ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ. ಗುರುವಾರದ ವಿಶೇಷ ವರ್ಗಾವಣೆ ಕೌನ್ಸಲಿಂಗ್ ನ ಬೆಳವಣಿಗೆಗಳ ಬಳಿಕ ತಾಲ್ಲೂಕಿನ 25 ಗ್ರಾಪಂ ಗಳಲ್ಲಿ ಪಿಡಿಒ ಹುದ್ದೆ ಖಾಲಿ ಇದ್ದು, ಸೆ.22ರ ವರೆಗೆ ನಡೆಯಲಿರುವ ರಾಜ್ಯಮಟ್ಟದ ವರ್ಗಾವಣೆ ಕೌನ್ಸಲಿಂಗ್ ನಲ್ಲಿ ಬಹುತೇಕ ಎಲ್ಲ ಸ್ಥಾನಗಳು ಭರ್ತಿ ಆಗಲಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ 

Home add -Advt

Related Articles

Back to top button