Kannada NewsLatestWorld

*ಪ್ರಬಲ ಭೂಕಂಪ: ಮತ್ತೆ ಸುನಾಮಿ ಎಚ್ಚರಿಕೆ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ರಷ್ಯಾದಲ್ಲಿ ಪ್ರಭಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4ರಷ್ಟು ತೀವ್ರತೆ ದಾಖಲಾಗಿದೆ. ಇದರ ಬೆನ್ನಲ್ಲೇ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ರಷ್ಯಾದಲ್ಲಿ ತಿಂಗಳ ಹಿಂದಷ್ಟೇ ಭೀಕರ ಭೂಕಂಪ, ಸುನಾಮಿ ಅಪ್ಪಳಿಸಿತ್ತು. ಇದೀಗ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ್ದು, ರಷ್ಯಾದ ಕರಾವಳಿ ಭಾಗದಲ್ಲಿ ಸುನಾಮಿ ಸಂಭವಿಸುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ರಷ್ಯಾದ ಕಮ್ಚುಟ್ಕಾ ಪ್ರದೇಶದ ಪೂರ್ವ ಕರಾವಳಿ ಬಳಿ ಭೂಕಂಪ ಸಂಭವಿಸಿದೆ. 10 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಕರಾವಳಿಯಲ್ಲಿ ಸುನಾಮಿ ಆತಂಕ ಎದುರಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.

Home add -Advt


Related Articles

Back to top button