Kannada NewsKarnataka NewsNational

*ಕುಡಿದ ಮತ್ತಿನಲ್ಲಿ ಯಮನಾದ ಟ್ರಕ್ ಚಾಲಕ: ಘಟನೆಯಿಂದ ಬೆಚ್ಚಿಬಿದ್ದ ಜನ*

ಪ್ರಗತಿವಾಹಿನಿ ಸುದ್ದಿ: ಎಣ್ಣೆ ಮತ್ತಲ್ಲಿ ಟ್ರಕ್ ಚಲಾಯಿಸಿದ ಚಾಲಕ ಹಲವರ ಪಾಲಿಗೆ ಯಮವಾಗಿದ್ದಾನೆ.‌ ಪಾದಚಾರಿಗಳು ಮತ್ತು ವಾಹನಗಳಿಗೆ ಟ್ರಕ್‌ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ.

ಎಣ್ಣೆ ಮತ್ತಲ್ಲಿ ಚಾಲಕ ಟ್ರಕ್‌ ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ದೇಹಗಳು ಛಿದ್ರವಾಗಿ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ಅನೇಕರು ಗಂಭೀರ ಸ್ಥಿತಿಯಲ್ಲಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಸೋಮವಾರ ವಿಮಾನ ನಿಲ್ದಾಣ ರಸ್ತೆಯ ಶಿಕ್ಷಕ್ ನಗರದಲ್ಲಿ ಲಾರಿ ಚಾಲಕ ಪಾದಾಚಾರಿ ಮಾರ್ಗಕ್ಕೆ ವಾಹನ ನುಗ್ಗಿಸಿ ಹಲವು ಜನರ ಮೇಲೆ ಹಾಗೂ 10 ಕ್ಕೂ ಹೆಚ್ಚು ವಾಹನಗಳ ಮೇಲೆ ಹರಿಸಿದ್ದಾನೆ.

ಚಾಲಕ ಕಂಠ ಪೂರ್ತಿ ಕುಡಿದಿದ್ದ ಈ ಮಾರಕ ಘಟನೆಗೂ ಮುನ್ನ ಆತ ರಾಮಚಂದ್ರ ನಗರ ಡಿವೈಡರ್‌ನಲ್ಲಿ ಇಬ್ಬರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದು, ಅವರ ವಾಹನಗಳನ್ನು ಎಳೆದುಕೊಂಡು ಹೋಗಿ ನಂತರ ಬಡಾ ಗಣಪತಿ ಪ್ರದೇಶದ ಕಡೆಗೆ ಬಂದು ಪಾದಾಚಾರಿ ಮಾರ್ಗದಲ್ಲಿ ಲಾರಿ ಚಲಾಯಿಸಿದ್ದಾನೆ ಎಂದು ತಿಳಿದು ಬಂದಿದೆ. 

Home add -Advt

Related Articles

Back to top button