
ಪ್ರಗತಿವಾಹಿನಿ ಸುದ್ದಿ: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ಶಾಕತ್ವವನ್ನು ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ನಂಜೇಗೌಡಗೆ ಕೋರ್ಟ್ ರಿಲೀಫ್ ಕೂಡ ನೀಡಿದೆ.
ಕರ್ನಾಟಕ ಹೈಕೋರ್ಟ್ ಇಂದು ನಂಜೇಗೌಡ ಅವರ ಶಾಸಕ ಸ್ಥಾನ ಅಸಿಂಧುಗೊಳಿಸಿ, ಮಾಲೂರು ಕ್ಷೇತ್ತಕ್ಕೆ ಮರು ಮತಎಣಿಕೆ ನಡೆಸುವಂತೆ ಸೂಚಿಸಿ ಆದೇಶ ಹೊರಡಿಸಿತ್ತು. ಇದೇ ವೇಳೆ ನಂಜೇಗೌಡ ಅವರ ಪರ ವಕೀಲೆ ನಳಿನಾ ಮಾಯಗೌಡ ಅವರು, ಹೈಕೋರ್ಟ್ ತೀರ್ಪಿಗೆ ಮಧ್ಯಂತರ ತಡೆ ನೀಡುವಂತೆ ಕೋರಿ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ಹೈಕೋರ್ಟ್, ಒಂದು ತಿಂಗಳ ಒಳಗಾಗಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ.
ಇದರಿಂದಾಗಿ ನಂಜೇಗೌಡ ಅವರಿಗೆ ತಾತ್ಕಲೈಕ ರಿಲೀಫ್ ಸಿಕ್ಕಂತಾಗಿದೆ.