Kannada NewsKarnataka NewsLatest
*ಧರ್ಮಸ್ಥಳ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಶೋಧದ ವೇಳೆ ಮರದಲ್ಲಿ ಹಗ್ಗ, ಸೀರೆ, ಮೂಳೆಗಳು ಪತ್ತೆ*

ನೇಣು ಬಿಗಿದ ಬಗ್ಗೆ ಶಂಕೆ
ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಮಾವ ವಿಠಲ ಗೌಡ ತೋರಿಸಿರುವ ಬಂಗ್ಲಗುಡ್ಡದಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧ ನಡೆಸಿದ್ದು, ಈ ವೇಳೆ ರಾಶಿ ರಾಶಿ ಮೂಳೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.
ಬಂಗ್ಲಗುಡ್ಡದ ದಟ್ಟ ಅರಣ್ಯದಲ್ಲಿ 5 ಕಡೆ ಮೂಳೆಗಳು, ಬುರುಡೆ ಸಿಕ್ಕಿದೆ. ಇದೇ ವೇಳೆ ಒಂದು ಕಡೆ ಮರದ ಬಳಿ ಅಸ್ಥಿಪಂಜರ, ಹಿರಿಯ ನಾಗರಿಕರ ಕಾರ್ಡ್, ಮರದ ಮೇಲೆ ಎರಡು ಹಗ್ಗ, ಸೀರೆ ಪತ್ತೆಯಾಗಿದೆ. ನೇಣು ಬಿಗಿದಿರುವ ಅನುಮಾನ ವ್ಯಕ್ತವಾಗಿದೆ.
ಸದ್ಯ ಎಸ್ ಐಟಿ ಟೀಂ ಎಲ್ಲಾ ವಸ್ತು, ಮೂಳೆಗಳನ್ನು ಸಂಗ್ರಹಿಸಿ ಕಾನೂನು ಪ್ರಕಾರ ತನಿಖೆ ಮುಂದುವರೆಸಿದೆ. ಇದು ಧರ್ಮಸ್ಥ ಕೇಸ್ ಗೆ ಮತ್ತೊಂದು ರೀತಿಯ ತಿರುವು ನೀಡಿದೆ.