Belagavi NewsBelgaum NewsKannada NewsKarnataka News

*ಯಮಕನಮರಡಿಯಲ್ಲಿ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದಿನ ದಿನಗಳಲ್ಲಿ ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಹಿಳೆಯರಿಗೆ ತಿಳಿಹೇಳುವ ಅವಶ್ಯಕತೆ ಇಲ್ಲ. ಅವರು ಪ್ರತಿ ಮನೆಯ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಂತಹ ಕುಟುಂಬಗಳು ಇಂದು ಆರ್ಥಿಕವಾಗಿ ಬೆಳೆಯುತ್ತಿವೆ ಎಂದು  ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು. 

ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಹುಣಸಿಕೊಳ್ಳಮಠದ ಸಮುದಾಯ ಭವನದಲ್ಲಿ ಶುಕ್ರವಾರ ಕೆನರಾ ಬ್ಯಾಂಕಿನ ಮುಖ್ಯ ಕಚೇರಿ, ಯಮಕನಮರಡಿ ಶಾಖೆಯ ಹಾಗೂ ಬೆಳಗಾವಿ ಜಿಪಂ ಸಹಯೋಗದಲ್ಲಿ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. 

ಕೆನರಾ ಬ್ಯಾಂಕ್ ಪ್ರತಿ ವ್ಯಕ್ತಿಗೆ ವಿಮಾ ಸೌಲಭ್ಯ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದರ ಸದ್ಬಳಿಕೆಯನ್ನು ಗ್ರಾಹಕರು ಮಾಡಿಕೊಳ್ಳಬೇಕು. ಈ ಬ್ಯಾಂಕಿನಿಂದ ರೈತರಿಗೆ, ಮಹಿಳಾ ಸ್ವಹಾಯ ಸಂಘಗಳಿಗೆ, ವಿದ್ಯಾರ್ಥಿಗಳಿಗೆ ಅನೇಕ ರೀತಿಯಲ್ಲಿ ಸಾಲ ಸೌಲಭ್ಯ ನೀಡುತ್ತಿದೆ. ಈ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಬೆಳೆಯಬೇಕು ಎಂದರು.  

ಬೆಂಗಳೂರಿನ ಎಸ್‌ಎಲ್‌ಬಿಸಿ ಜನರ್ ಮಾನ್ಯೇಜರ್ ಬಾಸ್ಕರ್ ಚಕ್ರವರ್ತಿ ಹಾಗೂ ಚಿಕ್ಕೋಡಿ ಮುಖ್ಯ ಕಚೇರಿಯ ಮಾನ್ಯೇಜರ್ ಎಂ.ಪಣಿಶಾಯನ್ ಅವರು ಮಾತನಾಡಿ, ವಿಮಾ ಸೌಲಭ್ಯ ಇಲ್ಲದೆ ಹೋದರೆ ಬಹಳಷ್ಟು ಕುಟುಂಬಗಳ ಆರ್ಥಿಕ ಮಟ್ಟ ಕುಸಿಯಲು ಆರಂಭವಾಗುವುದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆನರಾ ಬ್ಯಾಂಕ್ ನಲ್ಲಿ ವಿಮಾ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

Home add -Advt

ಇದೇ ಸಂದರ್ಭದಲ್ಲಿ ನಾಗನೂರ ಕೆ.ಎಂ. ಗ್ರಾಮದ ಹೊಳೆಮ್ಮಾ ದೇವಿ ಸ್ವ-ಸಹಾಯ ಸಂಘ ಮತ್ತು ಕಾವೇರಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಪತ್ರವನ್ನು ಜಿಪಂ ಸಿಇಒ ರಾಹುಲ್ ಶಿಂಧೆ ನೀಡಿದರು. ಯಮಕನಮರಡಿ ಗ್ರಾಪಂ ಅಧ್ಯಕ್ಷೆ ಆಸ್ಮಾ ಫಣಿಬಂಧ, ಬೆಳಗಾವಿಯ ಕೆನರಾ ಬ್ಯಾಂಕಿನ ಪ್ರಶಾಂತ ಘೋಡಕೆ, ಪಿಡಿಒ ಎಸ್.ಎಸ್. ಢಂಗ, ಆನಂದ ಹೊಳೆನ್ನವರ, ಚಿಕ್ಕೋಡಿ ಆರ್‌ಒ ಜುಗಳ ಚೌವ್ಹಾಣ, ಯಮಕನಮರಡಿ ಕೆನರಾ ಬ್ಯಾಂಕ್ ಮಾನೇಜರ ನರಸಿಂಮ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button