*ಇಟಗಿಗೆ ಉನ್ನತೀಕರಿಸಿದ ಪ್ರೌಢ ಶಾಲೆ: ಮಕ್ಕಳೊಂದಿಗೆ ಅಂಜಲಿ ನಿಂಬಾಳಕರ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಇಟಗಿ ಗ್ರಾಮಕ್ಕೆ ಮಂಜೂರಾಗಿದ್ದ ಉನ್ನತೀಕರಿಸಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಬೇರೆ ಕ್ಷೇತ್ರಕ್ಕೆ ವರ್ಗಾಯಿಸಿದ್ದನ್ನು ಖಂಡಿಸಿ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಲಾ ಶಿಕ್ಷಣ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿ ಉನ್ನತೀಕರಿಸಿದ ಪ್ರೌಢಶಾಲೆಯನ್ನು ಇಟಗಿ ಗ್ರಾಮದಲ್ಲಿಯೇ ಮುಂದುವರಿಸಲು ಆದೇಶಿಸಿದ್ದಾರೆ ಎಂದು ಅಂಜಲಿ ನಿಂಬಾಳಕರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಂಜಲಿ ನಿಂಬಾಳ್ಕರ್, ನನ್ನ ಮತಕ್ಷೇತ್ರದ ಇಟಗಿ ಗ್ರಾಮಕ್ಕೆ ನಾನು ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಉನ್ನತಿಕರನವನ್ನು ಮಾಡಲು ಸಚಿವರಲ್ಲಿ ಪತ್ರದ ಮೂಲಕ ವಿನಂತಿಸಿದ್ದೆ. ಅದೇ ಪ್ರಕಾರ ಸಚಿವರು ಅನುಮೋದನೆ ನೀಡಿ ಆದೇಶ ಜಾರಿ ಮಾಡಿದರು, ಕೆಲ ರಾಜಕೀಯ ಹಿತಾಸಕ್ತಿಗಳು ಈ ಆದೇಶವನ್ನು ಮಾರ್ಪಡಿಸಲು ಪ್ರಯತ್ನಿಸಿ ಈ ಅನುಮೋದನೆಯನ್ನು ರದ್ದುಪಡಿಸಲು ಪ್ರಯತ್ನಿಸಿದ್ದರಿಂದ ಇನ್ನೊಂದು ಗ್ರಾಮಕ್ಕೆ ವರ್ಗಾವಣೆಯಾಗಿತ್ತು.
ಅದನ್ನು ಪ್ರಶ್ನಿಸಿ ಇಟಗಿ ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿ ಸಚಿವರಿಗೆ ಕರೆ ಮಾಡಿ ವಿನಂತಿಸಿ ಕೊಂಡಾಗ ಸಚಿವ ಮಧು ಬಂಗಾರಪ್ಪ ಸಕಾರಾತ್ಮಕ ಸ್ಪಂದನೆ ನೀಡಿ ಉನ್ನತೀಕರಿಸಿದ ಪ್ರೌಢಶಾಲೆಯನ್ನು ಇಟಗಿ ಗ್ರಾಮದಲ್ಲಿಯೇ ಮುಂದುವರಿಸಲು ದೂರವಾಣಿ ಮುಖಾಂತರ ಆದೇಶಿಸಿದ್ದಾರೆ. ಸಚಿವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.