Kannada NewsNational

*ಭಾರಿ ಮಳೆಗೆ ಕುಸಿದ ಐದು ಮಹಡಿ ಕಟ್ಟಡ: ಇಬ್ಬರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಸತತವಾಗಿ ಸುರಿತುತ್ತಿರುವ ಭಾರಿ ಮಳೆಗೆ  ಐದು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದು 12ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘೋರ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ  ಸಂಭವಿಸಿದೆ.

ಇಂದೋರ್‌ನ ರಾಣಿಪುರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು ರಕ್ಷಣಾ ಕಾರ್ಯಾಚರಣೆ ಹಾಗೂ ಅವಶೇಷಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಒಂದೇ ಕುಟುಂಬದ 14 ಸದಸ್ಯರು ಸಿಲುಕಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅವರಲ್ಲಿ 12 ಮಂದಿ ಮಹಾರಾಜ ಯಶ್ವಂತರಾವ್‌ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇಬ್ಬರು ಸಾವನ್ನಪ್ಪಿದ್ದು ಅವರನ್ನು ಅಲಿಫಾ ಮತ್ತು ಫಹೀಮ್ ಎಂದು ಗುರುತಿಸಲಾಗಿದೆ.

ಸದ್ಯ ಐದಾರು ಗಂಟೆಗಳ ರಕ್ಷಣಾ ಕಾರ್ಯಾಚರಣೆ ಈಗ ಮುಗಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕಟ್ಟಡವು 8 ರಿಂದ 10 ವರ್ಷ ಹಳೆಯದಾಗಿರಬಹುದು ಎನ್ನಲಾಗಿದೆ.

Home add -Advt

Related Articles

Back to top button