Kannada NewsKarnataka NewsNationalTravel

*ಅಪಘಾತದ ರಭಸಕ್ಕೆ ಧಗಧಗಿಸಿದ ವಾಹನ: ನಾಲ್ವರ ಸಜೀವ ದಹನ*

ಪ್ರಗತಿವಾಹಿನಿ ಸುದ್ದಿ: ಕಾರು ಮಿನಿ ಟ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ.

ಈ ಘಟನೆಯು ಉತ್ತರ ಪ್ರದೇಶದ ಅಲಿಗಢ ಬಳಿಯ ರಾಷ್ಟ್ರೀಯ ಹೆದ್ದಾರಿ 91 ರಲ್ಲಿ ಸಂಭವಿಸಿದೆ.‌ ಗಂಭೀರ ಗಾಯಗಳೊಂದಿಗೆ ಒಬ್ಬ ವ್ಯಕ್ತಿ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಎರಡೂ ವಾಹನಗಳು ಅತಿ ವೇಗದಲ್ಲಿ ಚಲಿಸುತ್ತಿದ್ದಾಗ ಮುಖಾಮುಖಿ ಡಿಕ್ಕಿ ಹೊಡೆದು ಒಟ್ಟಿಗೆ ಸಿಲುಕಿಕೊಂಡವು. ಪರಿಣಾಮ ಇಂಧನ ಟ್ಯಾಂಕ್ ಛಿದ್ರಗೊಂಡು, ಬೆಂಕಿ ಕಾಣಿಸಿಕೊಂಡು ಎರಡೂ ವಾಹನಗಳು ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾದವು. 

ದೇವಾಲಯಕ್ಕೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ವಾಹನ ಧಗದಗಿಸಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Home add -Advt

Related Articles

Back to top button