*ಬೆಳಗಾವಿಯಲ್ಲಿ ವಿಚಿತ್ರವಾಗಿ ಡೆತ್ ನೋಟ್ ಬರೆದಿಟ್ಟು ಅರ್ಚಕ ಆತ್ಮಹತ್ಯೆಗೆ ಶರಣು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಕ್ಷಿಣ ಕಾಶಿ ಎಂದೆ ಪ್ರಶಿದ್ಧ ಪಡೆಸಿರುವ ಬೆಳಗಾವಿ ಕಪಿಲೇಶ್ವರ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಯುವಕ ವಿಚಿತ್ರವಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಸಿದ್ದಾಂತ ಪೂಜಾರಿ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರಸಿದ್ಧ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಯುವಕ ಮೂರು ವರ್ಷದ ಹಿಂದೆ ಅತ್ಯಾಚಾರ ಆರೋಪದಲ್ಲಿ ಸಿಲುಕಿಕೊಂಡಿದ್ದ. ಬಳಿಕ ದೇವಸ್ಥಾನ ಬಿಟ್ಟು ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಜೀವನ ನಡೆಸುತ್ತಿದ್ದ.
ಆದರೆ ಏಕಾಏಕಿ ತನ್ನದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಡೇಬಜಾರ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಸಿದ್ದಾಂತ ಪೂಜಾರಿ ಮೊಬೈಲ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ.
ಡೆತ್ ನೋಟ್ ನಲ್ಲಿ ಏನಿದೆ..?
ತಾನು ಮೇಲೆ ಹೋಗುತ್ತಿದ್ದೇನೆ. ಅಲ್ಲಿ ದೇವರು ಭೇಟಿಯಾದ್ರೆ ತನಗೆ ಕಿರುಕುಳ ಕೊಟ್ಟವರನ್ನ ದೇವರ ಕಡೆಯಿಂದ ಹೊಡೆಸುತ್ತೇನೆ ಎಂದು ಬರೆದಿದ್ದಾನೆ. ಇತ್ತ ತನ್ನ ಅಜ್ಜಿ ಮೃತಪಟ್ಟಾಗ ಮಟನ್ ಮಾಡಿದ್ರು. ಆದ್ರೆ ತನ್ನ ತಿಥಿಗೆ ಮಟನ್ ಮಾಡಬೇಡಿ, ಬೇರೆ ಏನಾದರೂ ಮಾಡಿ ಎಂದು ಬರೆದಿದ್ದಾನೆ.
ಇದರ ಜೊತೆಗೆ ಮೂರು ವರ್ಷದ ಹಿಂದೆ ತಾನೂ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡ್ತಿದ್ದಾಗ ಅಲ್ಲಿರುವ ಕೆಲವರು ತನ್ನ ಮೇಲೆ ಸುಳ್ಳು ರೇಪ್ ಕೇಸ್ ಹಾಕಿದ್ದರಿಂದ ತನ್ನ ಜೀವನವೇ ಅಲ್ಲಿಂದ ಬರ್ಬಾದಾಯಿತು. ಚೆನ್ನಾಗಿ ಹೊರಟ್ಟಿದ್ದ ಲೈಫ್ ಹಾಳಾಗಿ ಹೋಯಿತು. ಗಣಪತಿ ಹಬ್ಬಕ್ಕೂ ಮುನ್ನವೇ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದ್ರೆ ಹಬ್ಬ ಮಾಡಿ ಮಾಡಿಕೊಂಡರಾಯ್ತು ಎಂದು ಅಂದುಕೊಂಡು ಆಗ ಸಾಯುವುದನ್ನ ಮುಂದೂಡಿದ್ದೆ. ತನ್ನ ಮೇಲೆ ಸುಳ್ಳು ಆರೋಪ ಮಾಡಿದವರನ್ನ ದೇವರ ಕಡೆಯಿಂದ ಹೊಡೆಸುತ್ತೇನೆ.
ಯಾರು ಕೂಡ ಅಳಬೇಡಿ ನನ್ನ ಆತ್ಮಕ್ಕೆ ನೋವಾಗುತ್ತೆ. ಇದೆಲ್ಲಾ ಹೇಳಲು ನನಗೆ ಆಗಲ್ಲ. ಯಾಕಂದ್ರೆ ಈಗ ನಾನು ಸತ್ತಿದ್ದೇನೆ. ನೀವೇ ಓದಿಕೊಳ್ಳಿ ಎಂದು ವಿಚಿತ್ರವಾಗಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.