Kannada NewsKarnataka NewsLatest
*ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್: ಪ್ರಿಯತಮನ ವಿರುದ್ಧವೇ ದೂರು ನೀಡಿದ ರೀಲ್ಸ್ ರಾಣಿ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಜೋಡಿಗಳದ್ದೇ ಹವಾ. ಹೀಗೆ ರೀಲ್ಸ್ ಮೂಲಕ ಖ್ಯಾತಿ ಪಡೆದಿರುವ ಕಿಪ್ಪಿ ಕೀರ್ತಿ ಇದೀಗ ತನ್ನ ಪ್ರಿಯಕರನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ತನ್ನ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಕಿಪ್ಪಿ ಕೀರ್ತಿ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯಕರ ಮುತ್ತು ಹಾಗೂ ಆತನ ಸ್ನೇಹಿತ ದಚ್ಚು ವಿರುದ್ಧ ದೂರು ನೀಡಿದ್ದಾಳೆ.
ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕರೆದು ವಿಚಾರಣೆ ನಡೆಸಿದಾಗ, ಕಿಪ್ಪಿ ಕೀರ್ತಿ ಮುತ್ತು ಹಾಗೂ ಆತನ ಸ್ನೇಹಿತನ ಬಗ್ಗೆ ಮಾತನಾಡಿದ್ದಳಂತೆ. ನೀವಿಬ್ಬರೂ ಗೇ ಎಂದು ಹೇಳಿದ್ದಳಂತೆ ಇದರಿಂದ ಕೋಪಗೊಂಡು ಆಕೆಯ ಫೋಟೋ ಹಾಗೂ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಸದ್ಯ ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಎನ್ ಸಿಆರ್ ದಾಖಲಾಗಿದೆ. ಮೂವರನ್ನು ಠಾಣೆಗೆ ಕರೆದು ಬುದ್ಧಿಹೇಳಿ ಕಳುಹಿಸಲಾಗಿದೆ.