Kannada NewsKarnataka NewsLatest

*ಮನೆಯ ಬಳಿಯೇ ಇದ್ದ ಚರಂಡಿಗೆ ಬಿದ್ದು 4 ವರ್ಷದ ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ಮನೆ ಮುಂದೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕ ಚರಂಡಿಗೆ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಬಳ್ಳಾರಿ ಜಿಲ್ಲೆಯ ಕುರೆಕುಪ್ಪ ಗ್ರಾಮದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಬಾಲಕ ಮನೆ ಬಳಿಯೇ ಇದ್ದ ಚರಂಡಿ ಬಳಿ ಹೋಘಿದ್ದು, ಈ ವೇಳೆ ಕಾಲು ಜಾರಿ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ.

ಅರವಿಂದ್ ಮೃತ ಬಾಲಕ. ನಿನ್ನೆ ಸಂಜೆಯಿಂದ ಬಾಲಕ ನಾಪತ್ತೆಯಾಗಿದ್ದ. ಬಾಲಕನಿಗಾಗಿ ಪೋಷರು ರಾತ್ರಿಯಿಡಿ ಹುಡುಕಾಟ ನಡೆಸಿದ್ದರು. ಆದಾಗ್ಯೂ ಎಲ್ಲಿಯೂ ಬಾಲಕನ ಸುಳಿವಿರಲಿಲ್ಲ. ಇಂದು ಬೆಳಿಗ್ಗೆ ಚರಂಡಿಯಲ್ಲಿ ಬಾಲಕನ ಶವ ತೇಲುತ್ತಿದ್ದಾಗಲೇ ಚರಂಡಿಗೆ ಬಿದ್ದು ಮಗು ಸಾವನ್ನಪ್ಪಿರುವುದು ಗೊತ್ತಾಗಿದೆ.

ಸಿಸಿಟಿವಿಯಲ್ಲಿ ಬಾಲಕ ಮನೆ ಬಳಿ ಆಟವಾಡುತ್ತಿರುವುದು, ಚರಂಡಿ ಬಳಿ ಕಾಲು ಜಾರಿ ಬಿದ್ದಿರುವ ದೃಶ್ಯ ಸೆರೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button