Belagavi NewsBelgaum NewsKannada NewsKarnataka NewsLatestTravel

*ಪಂಢರಾಪುರಕ್ಕೆ ಹೊರಟ್ಟಿದ್ದ ಯಾತ್ರಿಗಳಿಗೆ ಗುದ್ದಿದ ಕಾರು: 7 ಜನರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ : ಪಂಢರಾಪುರಕ್ಕೆ ಹೊರಟಿದ್ದ ಪಾದಯಾತ್ರಿಗಳಿಗೆ ಸ್ವಿಫ್ಟ್ ಕಾರೊಂದು ಗುದ್ದಿ ಅಪಘಾತ ಸಂಭವಿಸಿರುವ ಘಟನೆ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ಬಳಿ ಸಮೀಪ  ಸಂಭವಿಸಿದೆ.

ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಿಂದ ಮಹಾರಾಷ್ಟ್ರದ ಪಂಢರಾಪುರಕ್ಕೆ ಭಕ್ತರು ಪಾದಯಾತ್ರೆ ಮಾಡುತ್ತಿದ್ದರು. ಈ ವೇಳೆ  ಹಾರೂಗೇರಿ ಕ್ರಾಸ್‌ನ ಸಮೀಪ ಅಥಣಿ ಕಡಯಿಂದ ವೇಗವಾಗಿ ಬಂದ ಸ್ವಿಫ್ಟ್ ಕಾರು ಪಾದಯಾತ್ರೆಗಳಿಗೆ ಗುದ್ದಿದ ಪರಿಣಾಮ 7 ಜನ ಪಾದ ಯಾತ್ರಿಗಳಿಗೆ ಗಂಭೀರ  ಗಾಯಗಳಾಗಿವೆ.

ಗಾಯಾಳುಗಳನ್ನು ಸ್ಥಳೀಯ ಹಾರೋಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾರೂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Home add -Advt

Related Articles

Back to top button