
ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಮಗಳು ಪ್ರಿತಿಸುತ್ತಿದ್ದಾಳೆ ಎಂದು ಶಂಕಿಸಿ ತಂದೆ ಗುಂಡಿಕ್ಕಿ ಹತ್ಯೆ ಮಾಡಿ, ಶವವನ್ನು ನದಿಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಮೊರೆನಾದಲ್ಲಿ, 17 ವರ್ಷದ ಬಾಲಕಿಯನ್ನು ಆಕೆಯ ಕುಟುಂಬದವರು ಗುಂಡಿಕ್ಕಿ ಕೊಂದ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯ ನಂತರ, ಆಕೆಯ ಶವವನ್ನು 21 ಕಿ.ಮೀ ದೂರದಲ್ಲಿರುವ ನದಿಗೆ ಎಸೆದಿದ್ದಾರೆ.
ಬಾಲಕಿ ಪ್ರಿತಿಸುತ್ತಿದ್ದಳು ಎಂದು ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಪೊಲೀಸರು ಭಾನುವಾರ ಬೆಳಿಗ್ಗೆ ಶವ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣ ಸಂಬಂಧ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಐದು ದಿನಗಳ ಬಳಿಕ ನೀರಿನಿಂದ ಶವ ಹೊರಗೆ ತೆಗೆದು ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಿದ್ದಾರೆ.