Kannada NewsKarnataka NewsLatest
*ಬಡಿಗೆ ಬಡಿದಾಟ ಜಾತ್ರೆ: ದೊಣ್ಣೆಯಿಂದ ಹೊಡೆದುಕೊಳ್ಳುವಾಗ ದುರಂತ: ಇಬ್ಬರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ದೇವರಗುಡ್ದದ ಬಡಿದಾಟ ಜಾತ್ರೆಯಲ್ಲಿ ದುರಂತ ಸಂಭವಿಸಿದ್ದು, ದೊಣ್ಣೆಯಿಂದ ಬಡಿದಾಡಿಕೊಳ್ಲುವಾಗ ಇಬ್ಬರು ಸಾವನ್ನಪ್ಪಿದ್ದಾರೆ.
ಕರ್ನಾಟಕ-ಆಂಧ್ರ ಗಡಿಭಾಗದ ದೇವರಗುಡ್ಡದಲ್ಲಿ ಮಾಳಮಲ್ಲೇಶ್ವರ ಸನ್ನಿಧಿಯಲ್ಲಿ ಗ್ರಾಮಗಳ್ ಅಜನರು ದೊಣ್ಣೆಯಿಂದ ಬಡಿದಾಡಿಕೊಂಡು ಭಕ್ತಿ ಮೆರೆಯುತ್ತಾರೆ. ತಮ್ಮ ಊರಿಗೆ ಉತ್ಸವ ಮೂರ್ತಿ ಕರೆದೊಯ್ಯಲು ಈರೀತಿ ಬಡಿಗೆ ಬಡಿದಾಟ ನಡೆಸಲಾಗುತ್ತದೆ.
ಅರಕೇರ-ನೇರಣಿಕೆ ಗ್ರಾಮಗಳ ಗ್ರಾಮಸ್ಥರ ನಡುವೆ ಬಡಿಗೆ ಬಡಿದಾಟ ನಡೆದಿದ್ದು, ಈ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. 15 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.