Belagavi NewsBelgaum NewsFilm & EntertainmentKarnataka NewsLatest
‘ಚುರುಮರಿಯಾ’ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ: ರಂಗ ಸೃಷ್ಟಿ ಮತ್ತು ಲಿಂಗಾಯತ ಮಹಿಳಾ ಸಮಾಜ ಹಾಗೂ ಕನ್ನಡ ಭವನ ಆಶ್ರಯದಲ್ಲಿ ಇದೇ ರವಿವಾರ ದಿನಾಂಕ 5-10-2025 ರಂದು ಮಧ್ಯಾಹ್ನ 3 ಘಂಟೆಗೆ ಕನ್ನಡ ಭವನದಲ್ಲಿ ನೀಲಗಂಗಾ ಚರಂತಿಮಠ ಅವರ ಕಥೆ ಆಧಾರಿತ “ಚುರುಮರಿಯಾ” ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿದ್ಯದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ನಿರ್ದೇಶಕಿ ಸುಪ್ರಿಯಾ ನಿಪ್ಪಾಣಿ, ಮಹಾದೇವ ಹಡಪದ, ನೀಲಾಗಂಗಾ ಚರಂತಿಮಠ, ಶಾರದಾ ಮುಳ್ಳೂರು, ಮಧುಮತಿ ಹಿರೇಮಠ, ಸುಮಾ ಕಿತ್ತೂರು, ರಮೇಶ್ ಜಂಗಲ್, ಯ.ರು. ಪಾಟೀಲ್ ಮೊದಲಾದವರು ಉಪಸ್ಥಿತರಿರಲಿದ್ದಾರೆ.