Belagavi NewsBelgaum NewsKarnataka NewsLatestPolitics
*ಬಾಲಕಿ ಮೇಲೆ ಕ್ರೌರ್ಯ ಮೆರೆದು ಕೊಲೆಗೈದ ಅಪರಾಧಿಗೆ ಗಲ್ಲುಶಿಕ್ಷೆ: ಪೊಲೀಸರ, ವಕೀಲರ ನಿಷ್ಠೆ, ನ್ಯಾಯಾಧೀಶರ ಕಠಿಣ ತೀರ್ಪಿನ ಬಗ್ಗೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘನೆ*

ಪ್ರಗತಿವಾಹಿನಿ ಸುದ್ದಿ: ರಾಯಬಾಗ ತಾಲೂಕಿನಲ್ಲಿ ಬಾಲಕಿಯ ಮೇಲೆ ಕ್ರೌರ್ಯ ಮೆರೆದು ಕೊಲೆ ಮಾಡಿದ ವ್ಯಕ್ತಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ, 10 ಲಕ್ಷ ರೂ ದಂಡ ವಿಧಿಸಿದ ಸುದ್ದಿ ತಿಳಿದು ಮನಸ್ಸಿಗೆ ಸಮಾಧಾನವಾಯಿತು. ಜೊತೆಗೆ, ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್ಐ ಗಿರಿ ಮಲ್ಲಪ್ಪ ಉಪ್ಪಾರ ಬಾಲಕಿಯ ಮೇಲಿನ ಕ್ರೌರ್ಯತೆ ನೆನೆದು ಕಣ್ಣೀರು ಹಾಕಿದ ಘಟನೆ ಮನಕಲಕಿತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಪೊಲೀಸರ ಇಂತಹ ಮಾನವೀಯತೆ, ಸರಕಾರಿ ವಕೀಲರ ನಿಷ್ಠೆ, ನ್ಯಾಯಾಧೀಶರ ಕಠಿಣ ತೀರ್ಪುಗಳಿಂದಾಗಿ ಹತ್ಯೆಗೀಡಾದ ಅಮಾಯಕ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವೆಯಾಗಿ ಪ್ರಕರಣದ ತನಿಖೆಯಲ್ಲಿ ಭಾಗಿಯಾದ ಎಲ್ಲರಿಗೆ, ಸಮರ್ಥ ವಾದ ಮಂಡಿಸಿದ ವಕೀಲರಿಗೆ, ತೀರ್ಪು ನೀಡಿದ ನ್ಯಾಯಾಧೀಶರಿಗೆ ಎಲ್ಲರಿಗೂ ಮನಃಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.