Belagavi NewsBelgaum NewsHealthKannada NewsKarnataka NewsLatest

*ಕೆಎಲ್ ಇ ಆಸ್ಪತ್ರೆ ವೈದ್ಯರ ಮತ್ತೊಂದು ಸಾಧನೆ: 85 ವರ್ಷದ ರೋಗಿಗೆ ಕರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್ ಶಸ್ತ್ರಚಿಕಿತ್ಸೆ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಹೃದ್ರೋಗದಿಂದ ಬಳಲುತ್ತಿದ್ದ ಸುಮಾರು 85 ವರ್ಷ ವಯಸ್ಸಿನ ಮದ್ರಾಸ್ ರೆಜಿಮೆಂಟನ ಹಿರಿಯ ನಿವೃತ್ತ ಗೌರವ ಕ್ಯಾಪ್ಟನ್ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ (ಕರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್)ನೆರವೇರಿಸುವಲ್ಲಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತçಚಿಕಿತ್ಸಾ ವಿಭಾಗದ ತಜ್ಞವೈದ್ಯರು ಯಶಸ್ವಿಯಾಗಿದ್ದು, ರೋಗಿ ಕೇವಲ 7 ದಿನಗಳಲ್ಲಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ನಿವಾಸಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಸುಮಾರು 85 ವರ್ಷ ವಯಸ್ಸಿನ ಮದ್ರಾಸ್ ರೆಜಿಮೆಂಟನ ಹಿರಿಯ ನಿವೃತ್ತ ಗೌರವ ಕ್ಯಾಪ್ಟನ್ ಆಗಿದ್ದಾರೆ. ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಮುಖ್ಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ದರ್ಶನ ಡಿ ಎಸ್ ಮತ್ತು ಅವರ ತಂಡ ಯಶಸ್ವಿಯಾಗಿ ನೆರವೇರಿಸಿದೆ. ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ಆಗಮಿಸಿದಾಗ ಸಮಗ್ರವಾಗಿ ತಪಾಸಣೆಗೊಳಪಡಿಸಿ, ಎಂಜಿಯೋಗ್ರಾಫಿಯನ್ನು ನೆರವೇರಿಸಿದಾಗ ಆಕ್ಟೋಜೆನೇರಿಯನ್ ಪ್ರಮುಖ ಅಪಧಮನಿಗಳು ರಕ್ತ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲ್ಪಟ್ಟು, ನಡೆಯಲು ತೀವ್ರ ತೊಂದರೆ ಅನುಭವಿಸುತ್ತ, ಎದೆ ನೋವು, ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಸತತ ಮೂರು ಗಂಟೆಗಳ ಕಾಲ ನಡೆದ ತೆರೆದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಅಪಧಮನಿಗಳಲ್ಲಿ ಉಂಟಾದ ತೊಂದರೆಯನ್ನು ಸರಿಪಡಿಸಲಾಯಿತು. ಕೇವಲ ಮೂರೇ ದಿನದಲ್ಲಿ ರೋಗಿಯು ಹಾಸಿಗೆಯಿಂದ ಎದ್ದು, ನಡೆದಾಡಲು ಸಾಧ್ಯವಾಯಿತಲ್ಲದೇ 8ನೇ ದಿನಕ್ಕೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಸ್ನಾಯುಗಳು ಅಪಧಮನಿಗಳಂತೆ ಆಕ್ಟೋಜೆನೇರಿಯನ್‌ನಲ್ಲಿ ಕಾರ್ಯನಿರ್ವಹಿಸುವುದು ಒಂದು ಸವಾಲಿನ ಕರ‍್ಯ. ವಯಸ್ಸಾದ ಕಾರಣ ಅವರ ಮೂಳೆಗಳು ದುರ್ಬಲಗೊಂಡಿದ್ದಲ್ಲದೇ ದುರ್ಬಲ ಹೃದಯ ಸ್ಥಿತಿಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾಗಿತ್ತು ಎಂದ ಡಾ. ದರ್ಶನ ಡಿ ಎಸ್ ಅವರು, ಕಳೆದ 3 ದಶಕಗಳ ತಮ್ಮ ವೃತ್ತಿಜೀವನದಲ್ಲಿ ಅವರು ನಿರ್ವಹಿಸಿದ ಅತ್ಯಂತ ವಯಸ್ಸಾದ ರೋಗಿಯಾಗಿದ್ದಾರೆ ಎಂದು ಅವರು ಹೇಳಿದರು.

ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 28 ಸಾವಿರಕ್ಕೂ ಅಧಿಕ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ಪರ್ಫ್ಯೂಷನಿಸ್ಟ್ಗಳು, ದಾದಿಯರು ಮತ್ತು ಫಿಸಿಯೋಥೆರಪಿಸ್ಟ್ಗಳನ್ನು ಒಳಗೊಂಡ ತಂಡವು ಒಟ್ಟಾಗಿ ಕರ‍್ಯ ನಿರ್ವಹಿಸುತ್ತಿರುವದರಿಂದ ಒಳ್ಳೆಯ ಫಲಿತಾಂಶ ಕಂಡು ಬರುತ್ತಿದೆ. ಯಶಸ್ವಿ ಶಸ್ತçಚಿಕಿತ್ಸೆ ನೆರವೇರಿಸಿದ ಡಾ. ದರ್ಶನ ಅವರಿಗೆ ಡಾ. ಪಾರೀಶ್ವನಾಥ ಪಾಟೀಲ ಹಾಗೂ ಡಾ. ರಣಜಿತ ನಾಯಕ, ಅರವಳಿಕೆ ತಜ್ಞವೈದ್ಯರಾದ ಡಾ. ಶರಣಗೌಡಾ ಪಾಟೀಲ ಅವರು ಸಹಕಾರ ನೀಡಿದರು.

Home add -Advt

ಮದ್ರಾಸ್ ರೆಜಿಮೆಂಟನಲ್ಲಿ ಗೌರವ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಗುರುಪ್ಪ ಬಾಗಿಮನಿ ಅವರು ತೆರೆದ ಹೃದಯ ಶಸ್ತçಚಿಕಿತ್ಸೆ ನೆರವೇರಿದ್ದರೂ ಕೂಡ ಶತವರ್ಷ ಪೂರೈಸುವ ಗುರಿಯನ್ನು ಹೊಂದಿದ್ದಾರೆ. ಶೀಘ್ರ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವದಕ್ಕೆ ಅತ್ಯಂತ ಸಂತೋಷಪಟ್ಟು, ಆಸ್ಪತ್ರೆಯಲ್ಲಿ ಕಲ್ಪಿಸಿದ ಅತ್ಯುತ್ತಮ ಸೌಲಭ್ಯಗಳು ಮತ್ತು ಸೇವೆಗಳಿಗಾಗಿ ಡಾ. ದರ್ಶನ ಹಾಗೂ ಅವರ ತಂಡದ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಶಸ್ತ್ರಚಿಕಿತ್ಸೆ ನೆರವೇರಿಸಿದ ತಂಡವನ್ನು ಅಭಿನಂದಿಸಿ ಮಾತನಾಡಿದ ಅವರು, ವೈದ್ಯಕೀಯ ತಂತ್ರಜ್ಞಾನ, ನುರಿತ ಜ್ಞಾನವು ಯಾವುದೇ ಶಸ್ತ್ರಚಿಕಿತ್ಸೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಆವಿಷ್ಕಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ ಎಂದು ಹೇಳಿದ್ದಾರೆ. ಯಶಸ್ವಿ ಶಸ್ತçಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.


Related Articles

Back to top button