
ಪ್ರಗತಿವಾಹಿನಿ ಸುದ್ದಿ: ಹಾಡಹಗಲೇ ಸಿನಿಮಾ ಸ್ಟೈಲ್ ನಲ್ಲಿ ಗುತ್ತಿಗೆದಾರರನನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಮೋಹನ್ ಚೌವ್ಹಾಣ್ ಕಿಡ್ನ್ಯಾಪ್ ಆಗಿರುವ ಗುತ್ತಿಗೆದಾರ. ಹಾಡಹಗಲೇ ಗುತ್ತಿಗೆದಾರನನ್ನು ಕಿಡ್ನ್ಯಾಪ್ ಮಾಡುತ್ತಿರುವ ದೃಶ್ಯ ಸಿಸಿಟಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುತ್ತಿಗೆ ವಿಚಾರವಾಗಿ ಬಸಪ್ಪ ಹಾಗೂ ಮೋಹನ್ ಚೌವ್ಹಾಣ್ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ಮೋಹನ್ ಅವರನ್ನು ಎಳೆದೊಯ್ದು ಕಾರಿನಲ್ಲಿ ತುಂಬಿಕೊಂಡು ಅಪಹರಿಸಿದ್ದಾರೆ.
ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.




