
ಪ್ರಗತಿವಾಹಿನಿ ಸುದ್ದಿ: ಪಾಕಿಸ್ತಾನ ನಡೆಸಿದ ದಾಳಿಗೆ ಅಪಘಾನಿಸ್ಥಾನ ಪ್ರತಿಕಾರ ತಿರಿಸಿಕೊಳ್ಳುತ್ತಿದೆ. ಅಫ್ಘಾನಿಸ್ತಾನದ ತಾಲಿಬಾನ್ ಪ್ರತಿಕಾರಕ್ಕೆ ಪಾಕಿಸ್ತಾನದ ಕನಿಷ್ಠ 12 ಸೈನಿಕರು ಸಾವನ್ನಪ್ಪಿದ್ದಾರೆ.
ಅಫ್ಘಾನ್ ಸೇನೆಯು ಗಡಿಯುದ್ದಕ್ಕೂ ಹಲವಾರು ಪಾಕಿಸ್ತಾನಿ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಗಡಿಯ ಸಮೀಪವಿರುವ ಅಸ್ಥಿರ ಪ್ರದೇಶವಾದ ಹೆಲ್ಮಂಡ್ ಪ್ರಾಂತ್ಯದ ಬಹ್ರಾಮ್ ಚಾ ಜಿಲ್ಲೆಯಲ್ಲಿ ಈ ಹೋರಾಟ ಆರಂಭವಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನಿ ಮಿಲಿಟರಿಯ ಮೇಲೆ ಅಫ್ಘಾನಿಸ್ತಾನದ ದಾಳಿಯು ಕೆಲವು ದಿನಗಳ ಹಿಂದೆ ಕಾಬೂಲ್ ಮತ್ತು ಇತರ ನಗರಗಳ ಮೇಲೆ ಪಾಕಿಸ್ತಾನದ ವಾಯುಪಡೆ ನಡೆಸಿದ ವೈಮಾನಿಕ ದಾಳಿಗೆ ನೇರ ಪ್ರತಿಕ್ರಿಯೆಯಾಗಿತ್ತು.