Latest

*ಜೈಲಿಗೆ ಹೋದರೂ ಸರಿ ಕರಾಳ ದಿನ ಆಚರಿಸಿದ್ರೆ ಸುಮ್ಮನೆ ಬಿಡಬೇಡಿ: ನಾರಾಯಣ ಗೌಡ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಗಾಂಧೀ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಕನ್ನಡ ದೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದಲ್ಲಿ ಸಾವಿರಾರು ಸ್ವಯಂ ಸೇವಕರು ಕನ್ನಡ ದೀಕ್ಷೆ ಸ್ವೀಕರಿಸಿದರು. 

ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು, ನವೆಂಬರ್ 1 ರಂದು ಕರಾಳ ದಿನ ಆಚರಣೆಗೆ ಯಾರಾದರೂ ಮುಂದಾದರೆ ಅವರನ್ನು ಸುಮ್ಮನೇ ಬಿಡಬೇಡಿ, ಜೈಲಿಗೆ ಹೋದರು ಸರಿ. ನಿಮ್ಮನ್ನು ಬಿಡಿಸಿಕೊಂಡು ಬರಲು ನಾನೀದ್ದಿನಿ. ಎಂಇಎಸ್’ಗೆ ಕರಾಳ ದಿನ ಆಚರಿಸಲು ಅನುಮತಿ ನೀಡಿದರೇ, ಬೆಳಗಾವಿ ರಣಾಂಗಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

 ಎಂ.ಇ.ಎಸ್ ನವರು ಮರಾಠಿಯನ್ನು ಮಹಾರಾಷ್ಟ್ರದಲ್ಲಿರಲಿ. ಕನ್ನಡಿಗರಾಗಿ ಇಲ್ಲಿ ಬದುಕುವುದಾದರೇ ಇಲ್ಲಿರಿ. ಇಲ್ಲದಿದ್ದರೇ, ಫ್ರೀ ಆಗಿ ಬಸ್ಸು, ಟ್ರೇನ್ ಬಿಡುತ್ತೇವೆ ಗಂಟು ಮೂಟೆ ಕಟ್ಟಿಕೊಂಡು ಹೋಗಿ ಎಂದು ಆಕ್ರೋಶ ಹೊರ ಹಾಕಿದರು.

ಯುವಕರಲ್ಲಿ ಕನ್ನಡದ ಕಿಚ್ಚು ಹಚ್ಚುವ ಉದ್ದೇಶದಿಂದ ಬೆಳಗಾವಿಯಿಂದ ಕನ್ನಡ ದೀಕ್ಷೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ರಾಜಕೀಯ ಪಕ್ಷದವರು ಚುನಾವಣೆ ಬಂದಾಗ ನಮ್ಮ ಬೆಂಬಲ ಪಡಿತಾರೆ. ಆದರೇ ಇವರೇ 16 ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ರು. 100 ಬಾರಿ ಜೈಲಿಗೆ ಹಾಕಿದ್ರು ನಮ್ಮ ರಕ್ತ ನಾಡಿಗಳು ಕನ್ನಡ ಕನ್ನಡ ಎನ್ನುತ್ತವೆ. ಕನ್ನಡದ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಬರದಿದ್ದರೂ ಸರಿ. ತ್ರಿಮೂರ್ತಿಗಳ ಸ್ವರೂಪವಾದ ಮುನಿಗಳು ಬಂದು ಹರಸಿದ್ದಾರೆ. ಅವರೇ ನಿಜವಾದ ಕನ್ನಡವನ್ನು ಕಟ್ಟುವವರು ಎಂದರು.

Home add -Advt

ಕಾಂಗ್ರೆಸ್ ಬಿಜೆಪಿ ಪಕ್ಷಗಳು ರಾಜ್ಯದ ಜನರ ಪರವಾಗಿ ಬರುತ್ತವೋ ಇಲ್ಲ ಗೊತ್ತಿಲ್ಲ. ಆದರೇ ಕರವೇ ಜನಪರವಾಗಿರುತ್ತದೆ ಎಂಬ ವಿಶ್ವಾಸ ಕನ್ನಡಿಗರಲ್ಲಿದೆ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ್ ಶಿವಾಚಾರ್ಯ ಸ್ವಾಮಿಜೀಗಳು ನಾಡು ನುಡಿಗಾಗಿ ತಮ್ಮನ್ನು ತಾವೂ ಸಮರ್ಪಿಸಿಕೊಂಡಿರುವ ಟಿ.ಎ. ನಾರಾಯಣಗೌಡರ ಕಾರ್ಯವನ್ನು ಶ್ಲಾಘಿಸಿದರು. ಎಲ್ಲರೂ ಮೊದಲೂ ದೀಕ್ಷೆಯನ್ನು ತೆಗೆದುಕೊಳ್ಳಬೇಕು. ನೀನ್ಯಾರು ಎಂದರೇ, ಮೊದಲೂ ನಾನು ಕನ್ನಡಿಗನೆಂಬ ಮನೋಭಾವ ಎಲ್ಲರಲ್ಲಿಯೂ ಇರಬೇಕು ಎಂದರು.

ಅಥಣಿ ಮೋಟಗಿಮಠದ ಜಗದ್ಗುರು ಶ್ರೀ ಜಗದ್ಗುರು ಪ್ರಭು ಚನ್ನಬಸವ ಸ್ವಾಮಿಜೀಗಳು, ಬೇರೆಡೆಗಳಲ್ಲಿಯೂ ಕನ್ನಡದ ಕಾರ್ಯಕ್ರಮಗಳು ನಡೆಯುತ್ತವೆ. ಆದರೇ, ಸೂಕ್ಷ್ಮವಾದ ಭಾಷಾ ಬಾಂಧ್ಯವದ ನೆಲವಾದ ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮ ಅತ್ಯಂತ ಬೃಹತ್ ಕಾರ್ಯಕ್ರಮವಾಗಿರುತ್ತದೆ. 

ನಾರಾಯಣಗೌಡರಿಗೆ ಕನ್ನಡವೇ ಧರ್ಮ, ಜಾತಿ ಮತ. ಮದುವೆಯ ಕಂಕಣ ಮೂರು ದಿನದಲ್ಲಿ ಬಿಚ್ಚಿ ಹೋಗಬಹುದು. ಆದರೇ, ಕನ್ನಡ ದೀಕ್ಷೆಯ ಈ ಕಂಕಣ ಬದುಕನ್ನು ಜಾಜ್ವಲ್ಯವಾಗಿಸುವ ಶ್ರೀ ರಕ್ಷೆಯ ಕಂಕಣ ಎಂದರು.

ಕಾಂಗ್ರೆಸ್‌ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಮತ್ತು ನಾಡು ನುಡಿಯ ರಕ್ಷಣೆಗಾಗಿ ಕನ್ನಡ ದೀಕ್ಷೆ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ. ನೆಲ ಜಲ ರಕ್ಷಣೆಗಾಗಿ ಕನ್ನಡ ರಕ್ಷಣಾ ವೇದಿಕೆ ನಿರಂತರವಾಗಿ ಮಾಡುತ್ತಿದೆ. ಬೆಳಗಾವಿಯಲ್ಲಿ ಇಂದಿನಿಂದಲೇ ರಾಜ್ಯೋತ್ಸವದ ಸಡಗರ ಮನೆ ಮಾಡಿದೆ. ಚೆನ್ನಮ್ಮನ ನಾಡಿನಲ್ಲಿ ಎಲ್ಲರೂ ನಾಡು ನುಡಿಯ ರಕ್ಷಣೆಗೆ ಮುಂದಾಗೋಣ. ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು ಅವಶ್ಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಕರವೇ ರಾಜ್ಯ ಸಂಚಾಲಕ ಸುರೇಶ್ ಗವನ್ನವರ, ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.

Related Articles

Back to top button