Kannada NewsKarnataka NewsLatestPolitics

*BREAKING: ಹಾಸನಾಂಬೆ ದರ್ಶನಕ್ಕೆ ಬಂದ ಹೆಚ್.ಡಿ.ರೇವಣ್ಣ ದಂಪತಿ: ಮುಖ್ಯದ್ವಾರದಲ್ಲೆ ಕಾರು ತಡೆದ ಕಂದಾಯ ಇಲಾಖೆ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ: ಹಸನಾಂಬೆ ದೇವಿ ದರ್ಶನಕ್ಕೆ ಆಗಮಿಸಿದ ಮಾಜಿ ಸಚಿವ, ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರ ಕಾರನ್ನು ಕಂದಾಯ ಇಲಾಖೆ ಅಧಿಕಾರಿಗಳು ತಡೆದ ಘಟನೆ ನಡೆದಿದೆ.

ಶಾಸಕ ಹೆಚ್.ಡಿ.ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಶಿಷ್ಠಾಚಾರ ಪಾಲನೆ ಅಧಿಕಾರಿಗಳಿಗೆ ಮಾಹಿತಿ ನೀಡದೇ ನೇರವಾಗಿ ತಮ್ಮದೇ ಕಾರಿನಲ್ಲಿ ತಮ್ಮದೇ ಭದ್ರತೆ ವ್ಯವಸ್ಥೆಗಳೊಂದಿಗೆ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿದ್ದಾರೆ. ಈ ವೇಳೆ ದೇವಾಲಯದ ಮುಖ್ಯದ್ವಾರದಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು ರೇವಣ್ಣ ಕಾರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಅಧಿಕಾರಿಗಳ ವಿರುದ್ಧ ಗರಂ ಆದ ರೇವಣ್ಣ ಯಾರದು ಡಿಸಿ ಕರೆಯಿರಿ ಅವರನ್ನು ಎಂದು ಸಿಡಿಮಿಡಿಗೊಂಡರು. ದೇವಾಲಯದ ಬಳಿ ಯಾವುದೇ ವಾಹನ ಪ್ರವೇಶಕ್ಕೆ ಅವಕಾಶವಿಲ್ಲ ಎಂಬುದನ್ನು ಅಧಿಕಾರಿಗಳು ತಿಳಿಸಿದರು.

ಬಳಿಕ ಕಾರಿನಿಂದ ಇಳಿದ ರೇವಣ್ಣ ದಂಪತಿ ನಡೆದುಕೊಂಡೇ ದೇವಾಲಯಕ್ಕೆ ತೆರಳಿ ಹಾಸನಾಂಬೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Home add -Advt

Related Articles

Back to top button