Kannada NewsKarnataka NewsLatest

*ಪ್ರಿಯಕರನಿಗಾಗಿ ಪತಿಯನ್ನೇ ಹತ್ಯೆಗೈದು ಅಪಘಾತ ಎಂಬು ಬಿಂಬಿಸಿದ ಪತ್ನಿ*

ಪ್ರಗತಿವಾಹಿನಿ ಸುದ್ದಿ: ಪ್ರಿಯಕರನಿಗಾಗಿ ಪತ್ನಿಯೇ ಪತಿಯನ್ನು ಹತ್ಯೆಗೈದು ಬಳಿಕ ಅಪಘಾತದಲ್ಲಿ ಸಾವು ಎಂದು ಬಿಂಬಿಸಿರುವ ಘಟನೆ ಬೆಳಕಿಗೆ ಬಂದಿದೆ.

Home add -Advt

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಗ್ರಾಮದಲ್ಲಿ ಜನವರಿ 24ರಂದು ನಡೆದ ಕೊಲೆ ರಹಸ್ಯವನ್ನು ಪೊಲೀಸರು ಈಗ ಬಯಲು ಮಾಡಿದ್ದಾರೆ. ಮಹಿಳೆ ಪುಷ್ಪಾ ಮತ್ತು ಆಕೆಯ ಪ್ರಿಯಕರ ದೇವರಾಜ್​​ನನ್ನು ಸೂಲಿಬೆಲೆ ಪೊಲೀಸರು ಬಂಧಿಸಿದ್ದಾರೆ.

ಪ್ರಿಯಕರ ದೇವರಾಜ್​ಗಾಗಿ ಪುಷ್ಪಾ ತನ್ನ ಪತಿ ಅಶೋಕ್ (40) ನನ್ನು ಕೊಲೆ ಮಾಡಿಸಿದ್ದಳು. ಜನವರಿ 24ರಂದು ಅಶೋಕ್ ಮೃತದೇಹ ಗ್ರಾಮದ ಸಮೀಪದ ರಸ್ತೆಯ ತಿರುವಿನಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಇದೊಂದು ಅಪಘಾತವೆಂದು ಹೇಳಲಾಗಿತ್ತು. ಆದರೆ ಘಟನೆ ನಡೆದ ರೀತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸೂಲಿಬೆಲೆ ಪೊಲೀಸರು ತನಿಖೆ ನಡೆಸಿದಾಗ ಇದು ಪೂರ್ವಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ.

ಪುಷ್ಪಾ ತನ್ನ ಪ್ರಿಯಕರ ದೇವರಾಜ್ ಹಾಗೂ ಸಹಚರರಾದ ಮುನಿಂದ್ರ ಮತ್ತು ಸಿದ್ದಪ್ಪ ಜೊತೆ ಸೇರಿ ಪತಿ ಹತ್ಯೆಗೆ ಸಂಚು ರೂಪಿಸಿದ್ದಳು. ಎಣ್ಣೆ ಪಾರ್ಟಿ ಮಾಡುವ ನೆಪದಲ್ಲಿ ಅಶೋಕ್​​​ರನ್ನು ಕರೆದುಕೊಂಡು ಹೋಗಿ, ಕೆರೆಯ ಬಳಿ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Related Articles

Back to top button