Belagavi NewsBelgaum NewsKannada NewsKarnataka NewsPolitics
*ಬೆಳಗಾವಿ ನಗರದಲ್ಲಿ ಇಂದು ನೀರು ಪೂರೈಕೆ ಆಗಲ್ಲ*

ಪಡೆದು ತಮ್ಮ, ಬೆಳಗಾವಿ: ಜಿಲ್ಲೆಯ ತುಮ್ಮರಗುದ್ದಿ ಹತ್ತಿರ 1068 ಎಂ.ಎಂ. ಎಂ.ಎಸ್ ಕೊಳವೆಯಲ್ಲಿ, ಹಾಗೂ ರುಸ್ತಂಪುರ & ಪಾಶ್ಚಾಪೂರ ಹತ್ತಿರ 900 ಎಂ.ಎಂ ಪಿ.ಎಸ್.ಸಿ ಕೊಳವೆಯಲ್ಲಿ ಸೋರಿಕೆಯಾಗಿರುವುದರಿಂದ ನಿರ್ವಹಣಾ ಕಾರ್ಯ ಕೈಗೊಳ್ಳಲಾಗಿರುವುದರಿಂದ ದಿನಾಂಕ 14-10-2025 ರಂದು ನಗರದ ಎಲ್ಲ ಭಾಗಗಳಲ್ಲಿ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಬಹುದು.
ಪ್ರಾತ್ಯಕ್ಷಿಕ ವಲಯ ಸೇರಿದಂತೆ ಇಡೀ ಬೆಳಗಾವಿ ನಗರ, ನಗರದ ಎಲ್ಲಾ ಆಸ್ಪತ್ರೆಗಳು, ಬಲ್ಕ ಸರಬರಾಜಾಗುವ ಎಲ್ಲ ಕೈಗಾರಿಕೆಗಳು, ಕಂಟೋನಮೆಂಟ ಪ್ರದೇಶ, ಎಂಇಎಸ್, ಕೆಎಸ್‌ಆರ್‌ಪಿ, ಬುಡಾ ಮತ್ತು ಮಾರ್ಗಮಧ್ಯ ಹಳ್ಳಿಗಳಲ್ಲಿ ನೀರು ವ್ಯತ್ಯಯವಾಗಲಿದೆ. ಆದ್ದರಿಂದ ಸಾರ್ವಜನಿಕರಲ್ಲಿ ವಿನಂತಿಸುವುದೇನೆಂದರೆ, ಇಂತಹ ಅನಿವಾರ್ಯ ಸಮಯದಲ್ಲಿ ಮೇ|| ಎಲ್ & ಟಿ ಯೊಂದಿಗೆ ಸಹಕರಿಸಲು ಕೋರಲಾಗಿದೆ ಎಂದು ಕುಪ್ಪೆಂಪ್-ಕೆ.ಯು.ಐ.ಡಿ.ಎಫ್.ಸಿ, ಯೋ.ಅ.ಘ, ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.