*ಪಿಕೆಪಿಎಸ್ 11 ಸದಸ್ಯರ ಹೈಜಾಕ್ ಸುಳ್ಳು: ಅಣ್ಣಾಸಾಹೇಬ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಪಿಕೆ ಪಿಎಸ್ 11 ಸದಸ್ಯರ ಹೈಜಾಕ್ ಮಾಡಲಾಗಿದೆ ಎಂಬ ವದಂತಿ ಹಬ್ಬಿಸಿ , ಪ್ರತಿಸ್ಪರ್ಧಿ ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡುತ್ತಿದ್ದು, ಸದಸ್ಯರ ಹೈಜಾಕ್ ಎಂಬುದು ಸುಳ್ಳು ಸುದ್ದಿ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸ್ಪಷ್ಟನೆ ನೀಡಿದ್ದಾರೆ.
ನಮ್ಮ 76 ಸದಸ್ಯರು ನನಗೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಪ್ರತಿಸ್ಪರ್ಧಿ ತಮಗೆ ಬೆಂಬಲ ಸೂಚಿಸಿದ 25 ಸದಸ್ಯರ ತಮ್ಮ ಜೊತೆಗಿರುವ ಪೋಟೋ ವೈರಲ್ ಮಾಡಬೇಕೆಂದು ಅಣ್ಣಾಸಾಹೇಬ ಜೊಲ್ಲೆ ಪ್ರತಿಸ್ಪರ್ಧಿಗೆ ಸವಾಲು ಹಾಕಿದ್ದಾರೆ.

ಪ್ರತಿಸ್ಪರ್ಧಿಯ 10 ಪಿಕೆಪಿಸ್ ಸಂಘಗಳ ಪ್ರತಿನಿಧಿಗಳು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ. ಅಲ್ಲದೇ ನಮಗೆ ಕರೆ ಮಾಡಿ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ನಿಪ್ಪಾಣಿ ಕ್ಷೇತ್ರದಲ್ಲಿ ಒಟ್ಟು 119 ಪಿಕೆಪಿಎಸ್ ಇದ್ದು ಇವುಗಳ ಪೈಕಿ 76 ಕ್ಕೂ ಅಧಿಕ ಜನ ನಮ್ಮ ಜೊತೆಗಿದ್ದು ನಾವು ನಿನ್ನೆ ಸದಸ್ಯರ ಜೊತೆ ಫೋಟೋ ತೆಗೆದುಕೊಂಡು ಪೋಟೋ ವೈರಲ್ ಮಾಡಿದ್ದೇವೆ. ಇದೀಗ 10 ಸದಸ್ಯರು ಸಂಪರ್ಕ ಮಾಡಿ ತಮಗೆ ಬೆಂಬಲ ನೀಡಲಿದ್ದಾರೆ. ಒಟ್ಟು 86 ಸದಸ್ಯರು ಜೊಲ್ಲೆ ಪರವಾಗಿ ನಿಂತಿದ್ದಾರೆ. ತಮಗೆ ಬೆಂಬಲವಿದ್ದರೆ ಪಿಕೆಪಿಎಸ್ ಸದಸ್ಯರ ಫೋಟೋ ವೈರಲ್ ಮಾಡಬೇಕೆಂದು ಉತ್ತಮ ಪಾಟೀಲ ಗೆ ಜೊಲ್ಲೆ ಸವಾಲು ಎಸೆದಿದ್ದಾರೆ.