
ಪ್ರಗತಿವಾಹಿನಿ ಸುದ್ದಿ: ಅಫ್ಘಾನ್ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ತರಬೇತಿ ಪಡೆಯುತ್ತಿದ್ದ ಮೂವರು ಅಫ್ಘಾನ್ ಕ್ರಿಕೆಟಿಗರು ನಿಧನರಾಗಿದ್ದು, ಟ್ರೈ-ನೇಷನ್ ಸರಣಿಯಿಂದ ಅಫ್ಘಾನ್ ಹಿಂದೆ ಸರಿದಿದೆ.
ಪಾಕ್ ದಾಳಿಗೆ ಅಪಘಾನದ ಉರ್ಗುನ್ ಜಿಲ್ಲೆಗೆ ಸೇರಿದ ಮೂರು ಕ್ರಿಕೆಟಿಗರನ್ನು ನಾವು ಕಳೆದುಕೊಂಡಿದ್ದೇವೆ. ಕಬೀರ್, ಸಿಬ್ಬತುಲ್ಲಾ, ಹರೂನ್‌ರ ಸಾವು ಕ್ರಿಕೆಟ್ ಸಮುದಾಯಕ್ಕೆ ದೊಡ್ಡ ನಷ್ಟ. ಈ ದಾಳಿಯಲ್ಲಿ 5 ಮಂದಿ ನಾಗರಿಕರೂ ನಿಧನರಾಗಿದ್ದಾರೆ ಎಂದು ACB ತಿಳಿಸಿದೆ.
ವೀರರಿಗೆ ಗೌರವ ಸಲ್ಲಿಸಿ, ಪಾಕ್ & ಶ್ರೀಲಂಕಾ ಜೊತೆಗಿನ ಟ್ರೈ-ನೇಷನ್ ಸರಣಿಯಿಂದ ಅಫ್ಘಾನ್ ಹಿಂದೆ ಸರಿದಿದೆ.
“ಪಾಕಿಸ್ತಾನ ಆಡಳಿತವು ನಡೆಸಿದ ಹೇಡಿತನದ ದಾಳಿಯಲ್ಲಿ ಗುರಿಯಾಗಿಸಿಕೊಂಡ ಪಕ್ತಿಕ ಪ್ರಾಂತ್ಯದ ಉರ್ಗುನ್ ಜಿಲ್ಲೆಯ ವೀರ ಕ್ರಿಕೆಟಿಗರ ದುರಂತ ಹುತಾತ್ಮರ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತೀವ್ರ ದುಃಖವನ್ನು ವ್ಯಕ್ತಪಡಿಸಿದೆ” ಎಂದು ಎಸಿಬಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.