Kannada NewsKarnataka NewsLatest

*ಅಶ್ಲೀಲ ವಿಡಿಯೋ ವೈರಲ್: ಕಾಂಗ್ರೆಸ್ ಮುಖಂಡನ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಮುಖಂಡ ಹಾಗೂ ಮಹಿಳೆಯೊಬ್ಬರ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು, ತನ್ನ ಮಗಳ ವಿಡಿಯೋವನ್ನು ಅಶ್ಲೀಲವಾಗಿ ಬಿಂಬಿಸಿ ವೈರಲ್ ಮಾಡಿದ್ದಾನೆ ಎಂದು ಮಹಿಳೆ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಮೈಸೂರಿನ ಕೆ.ಆರ್.ನಗರದ ಕಾಂಗ್ರೆಸ್ ಮುಖಂಡ ಲೋಹಿತ್ ಹಾಗೂ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿದೆ ಎನ್ನಲಾಗಿದೆ. ಮಹಿಳೆ ಈಗಾಗಲೇ ಮದುವೆಯಾಗಿ ಪತಿ-ಪತ್ನಿ ಅನ್ಯೋನ್ಯವಾಗಿದ್ದಾರೆ. ಆದಾಗ್ಯೂ ಕಾಂಗ್ರೆಸ್ ಮುಖಂಡ ದುರುದ್ದೇಶದಿಂದ ಮಹಿಳೆಯ ವಿಡಿಯೋ ವೈರಲ್ ಮಾಡಿದ್ದಾನೆ ಎನ್ನಲಾಗಿದೆ.

ಮಹಿಳೆಯ ತಂದೆಯ ಜೊತೆಗೆ ಜಮೀನು ದಾರಿ ವಿಚಾರವಾಗಿ ನಡೆದ ಜಗಳ, ಗಲಾಟೆ ಹಿನ್ನೆಲೆಯಲ್ಲಿ ಈ ಸೇಡಿಗೆ ಮಹಿಳೆಯ ಬಗ್ಗೆ ಕೆಟ್ಟ ವಿಡಿಯೋ ಹರಿ ಬಿಡಲಾಗಿದೆ. ಈ ಬಗ್ಗೆ ಮಹಿಳೆಯ ತಂದೆ ಮೈಸೂರು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದು, ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್ ಐಆರ್ ದಾಖಲಾಗಿದೆ.

Home add -Advt

Related Articles

Back to top button