Belagavi NewsBelgaum NewsKannada NewsKarnataka News

*ಚೌಕಟ್ಟು ಅಳವಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಚನ್ನರಾಜ*

ಪ್ರಗತಿವಾಹಿನಿ ಸುದ್ದಿ: ಉಚಗಾಂವ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಮಾರುತಿ ಹಾಗೂ ಮಹಾದೇವ ಮಂದಿರಗಳ ಮುಖ್ಯ ದ್ವಾರಗಳಿಗೆ ಚೌಕಟ್ಟು ಅಳವಡಿಸುವ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪೂಜೆ ನೆರವೇರಿಸಿದರು.

cಮಾರುತಿ ಮಂದಿರ ನಿರ್ಮಾಣಕ್ಕಾಗಿ 50 ಲಕ್ಷ ರೂ ಹಾಗೂ ಮಹಾದೇವ ಮಂದಿರ ನಿರ್ಮಾಣಕ್ಕೆ 20 ಲಕ್ಷ ರೂ. ಗಳ ಅನುದಾನವನ್ನು ಒದಗಿಸಲಾಗಿದೆ. ಸ್ಥಳೀಯರ ಸಲಹೆ ಪಡೆದು ಸುಂದರವಾಗಿ ಮತ್ತು ಉತ್ತಮ ರೀತಿಯಲ್ಲಿ ಮಂದಿರ ನಿರ್ಮಾಣ ಮಾಡುವಂತೆ ಚನ್ನರಾಜ ಹಟ್ಟಿಹೊಳಿ ಗುತ್ತಿಗೆದಾರರಿಗೆ ಸೂಚಿಸಿದರು.


ಇದೇ ಸಮಯದಲ್ಲಿ, ಮುಂಬರಲಿರುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂಜೆಯಲ್ಲಿಯೂ ಅವರು ಭಾಗವಹಿಸಿದರು.

Home add -Advt

ಈ ವೇಳೆ ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ಬಸವರಾಜ ತೇರಸೆ, ಬಾಳಾಸಾಹೇಬ್ ದೇಸಾಯಿ, ಸಂಭಾಜೀ ಕದಂ, ರಾಮಾ ಕದಂ, ಸಚಿನ ತೆರಳೆ, ಮನೋಹರ್ ಹೊನಗೇಕರ್ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button