Belagavi NewsBelgaum NewsKannada NewsKarnataka NewsNational

*ಕೋಳಿ ಫಾರ್ಮ್ ನಲ್ಲಿ ವಿದ್ಯುತ್ ತಂತಿ ತಗುಲಿ ಮಾಲೀಕ ದುರ್ಮರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೋಳಿ ಫಾರ್ಮ್ ನಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಕೋಳಿ ಫಾರ್ಮ್ ಮಾಲೀಕ ಸಾವುವನ್ನಪ್ಪಿರುವ ದುರ್ಘಟನೆ ನಡೆದಿದೆ. 

ಬೆಳಗಾವಿ ತಾಲೂಕಿನ ಬಂಬರಗಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಂಗ್ರಾಳಿ ಕೆಎಚ್ ಗ್ರಾಮದ ರಾಮನಗರ ನಿವಾಸಿ ಅಮೋಲ್ ಜಾಧವ್ (43) ಎಂಬುವರು ಸಾವನ್ನಪ್ಪಿದ್ದಾರೆ. 

ಬಂಬರಗಾ ಗ್ರಾಮದಲ್ಲಿ ಕೋಳಿ ಫಾರ್ಮ್ ಹೊಂದಿದ್ದ ಅಮೋಲ್ ಕೆಲಸ ಮಾಡುವ ವೇಳೆ ಕಟ್ ಆಗಿಬಿದ್ದಿದ್ದ ವೈರ್ ಜೋಡಿಸುವಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button