*ಕೆಟ್ಟುನಿಂತಿದ್ದ ಆಟೋದಲ್ಲಿ ಮಹಿಳೆಯ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್*

ಪ್ರಗತಿವಾಹಿನಿ ಸುದ್ದಿ: ಕೆಟ್ಟುನಿಂತಿದ್ದ ಆಟೋದಲ್ಲಿ ಮಹಿಳೆಯ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೆಂಗಳೂರಿನ ತಿಲಕನಗರದಲ್ಲಿ ಈ ಘಟನೆ ನಡೆದಿತ್ತು.
ಸಲ್ಮಾ ಎಂಬಾ ಮಹಿಳೆಯ ಶವ ಆಟೋವೊಂದರಲ್ಲಿ ಮೂಟೆ ಕಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಲ್ಮಾಳ ಪ್ರಿಯಕರ ಸುಬ್ರಹ್ಮಣಿ ಆಕೆಯ ತಲೆಗೆ ಹೊಡೆದು ಕೊಲೆಗೈದಿರುವ ಶಂಕೆ ವ್ಯಕ್ತವಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆ ಇಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ಬಯಲಾಗಿದೆ.
ಮೃತ ಸಲ್ಮಾ ನಾಲ್ಕು ಮಕ್ಕಳ ತಾಯಿ. ಪತಿ ಸಾವನ್ನಪ್ಪಿದ ಬಳಿಕ ಸಲ್ಮಾ ನಾಲ್ವರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಳು. ಈ ವೇಳೆ ಸುಬ್ರಹ್ಮಣಿಯ ಪರಿಚಯವಾಗಿ ಅಕ್ರಮ ಸಂಬಂಧಕ್ಕೆ ತಿರುಗಿದೆ. ಬರಬರುತ್ತಾ ಸುಬ್ರಹ್ಮಣಿಯ ಸ್ನೇಹಿತ ಸೆಂಥಿಲ್ ಜೊತೆಗೂ ಸಲುಗೆ ಬೆಳೆಸಿದ್ದಳು. ಇದೇ ಕಾರಣಕ್ಕೆ ಸುಬ್ರಹ್ಮಣಿ, ಸೆಂಥಿಲ್ ನಡುವೆ ಗಲಾಟೆಯಾಗಿತ್ತು, ಇದೇ ವೇಳೆ ಇನ್ನೋರ್ವನ ಜೊತೆಯೂ ಸಲ್ಮಾ ಸ್ನೇಹದಲ್ಲಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ಸುಬ್ರಹ್ಮಣಿ ಹಾಗೂ ಸೆಂಥಿಲ್ ಇಬ್ಬರೂ ಸೇರಿ ತಿಲಕನಗರದ ಸುಬ್ರಹ್ಮಣಿ ಮನೆಯಲ್ಲಿ ಆಕೆಯನ್ನು ಕೊಲೆಗೈದು ಮೃತದೇಹವನ್ನು ಮಧ್ಯರಾತ್ರಿ ಮೂಟೆಕಟ್ಟಿ ಕೆಟ್ಟುನಿಂತಿದ್ದ ಆಟೋದಲ್ಲಿಟ್ಟು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಸುಬ್ರಹ್ಮಣಿ ಹಾಗೂ ಸೆಂಥಿಲ್ ಇಬ್ಬರನ್ನೂ ಬಂಧಿದ್ದಾರೆ.




