
ಪ್ರಗತಿವಾಹಿನಿ ಸುದ್ದಿ: ಬೆಳಗುಂದಿ ಗ್ರಾಮದ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಪ್ರೊಫ್ಲೆಕ್ಸ್ ಸೀಟ್ ಸಭಾ ಮಂಟಪವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಉದ್ಘಾಟಿಸಿದರು.
ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರಾದ ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಚಿತ್ರಣ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಗೇರಬೇಕೆನ್ನುವುದೇ ನಮ್ಮ ಅಪೇಕ್ಷೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೃಷ್ಣ ಬೆಳಗಾಂವ್ಕರ್, ಶಿವಾಜಿ ಬೋಕಡೆ, ಸೋಮಣ್ಣ ಗಾವಡಾ, ದಯಾನಂದ ಗಾವಡಾ, ಮನೋಹರ್ ಬೆಳಗಾಂವ್ಕರ್, ರಹಿಮಾನ್ ತಹಶಿಲ್ದಾರರ, ಶಿವಾಜಿ ಬೆಟಗೇರಿಕರ್, ಸುರೇಶ್ ಕಿಣೇಕರ್, ಲಕ್ಷ್ಮಣ ಮುಗುಟಕರ್, ಕಿರಣ ಮೋಟನಕರ್, ಮುಕುಂದ ಹಿಂಡಾಲ್ಗೆಕರ್, ಮಹಾದೇವ್ ಪಾಟೀಲ, ಸಿ.ಇ.ಒ ರಾಜಗೋಳ್ಕರ್, ಇಂಜಿನಿಯರ್ ಶೆಗುಣಸಿ ಮುಂತಾದವರು ಉಪಸ್ಥಿತರಿದ್ದರು.




