Belagavi NewsBelgaum NewsKannada NewsKarnataka NewsLatest

*BREAKING NEWS* *ಬೆಳಗಾವಿ: ಎಕ್ಸಿಕ್ಯೂಟಿವ್ ಎಂಜಿನಿಯರ್ ಬಂಧನ*

ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾಧೀನ ಪಡಿಸಿ ಕೊಂಡ ಜಮೀನಿಗೆ ಪರಿಹಾರದ ಚೆಕ್ ನೀಡಲು 1ಲಕ್ಷ್ಮ ಲಂಚ ಕೇಳಿದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರ ಬಂಧನ 

ಪ್ರಗತಿವಾಹಿನಿ ಸುದ್ದಿ, ರಾಯಬಾಗ: ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಅಶೋಕ್ ಶಿರೂರ ಅವರನ್ನು ಬಂಧಿಸಲಾಗಿದೆ.

ರಾಯಬಾಗ ತಾಲೂಕಾ ಖೇಮಲಾಪುರ ಗ್ರಾಮದ ಯಾಸಿನ್ ಪೇಂಢಾರಿಯವರ 14 ಗುಂಟೆ ಜಮೀನು ಮುಗಳಖೊಡ್ ಮತ್ತು ಹಾರೂಗೇರಿ ಪಟ್ಟಣಗಳಿಗೆ ಅಮೃತ ಯೋಜನೆ ಅಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾಧೀನ ಪಡಿಕೊಳ್ಳುವ ಸಲುವಾಗಿ ಸರಕಾರದಿಂದ ಮಂಜೂರಾದ ರೂ 18 ಲಕ್ಷ ಅನುದಾನದ ಚೆಕ್ ನ್ನು ಮಂಜೂರು ಮಾಡಿಕೊಡಲು ರೂ 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಅಶೋಕ್ ಶಿರೂರ ಅವರನ್ನು ಬಂಧಿಸಲಾಗಿದೆ.

ಇವರ ವಿರುದ್ಧ ಕರ್ನಾಟಕ ಲೋಕಾಯುಕ್ತ ಠಾಣೆ ಬೆಳಗಾವಿಯಲ್ಲಿ ದಿನಾಂಕ 17-10-2025 ರಂದು (ಪ್ರಕರಣ ಸಂಖ್ಯೆ 16/2025 ಕಲಂ 7(a) ಭ್ರಷ್ಟಾಚಾರ ಕಾಯ್ದೆ ಅಡಿ) PI ನಿರಂಜನ ಪಾಟೀಲ್ ರವರು ದೂರು ದಾಖಲಿಸಿಕೊಂಡು ತನಿಖೆ ಕೈಗೊಡಿದ್ದರು.

Home add -Advt

ಈ ಬಗ್ಗೆ ಎಸ್ಪಿ ಹಣಮಂತರಾಯ ಅವರ ಮಾರ್ಗದರ್ಶನದಲ್ಲಿ ಅಪಾದಿತ ಅಧಿಕಾರ ಅಶೋಕ್ ಶಿರೂರುರವರನ್ನು ಇಂದು ದಿನಾಂಕ 27-10-2025 ರಂದು ಅವರ ಕಚೇರಿಯಲ್ಲಿ ತನಿಖಾಧಿಕಾರಿಯಾದ ನಿರಂಜನ್ ಪಾಟೀಲ್ ಮತ್ತು ಸಿಬ್ಬಂದಿ ಬಂಧಿಸಿ ತನಿಖೆ ಕೈಕೊಂಡಿದ್ದಾರೆ.

ಈ ತನಿಖೆ ಕಾಲಕ್ಕೆ ಸಹಾಯಕರಾಗಿ ಗೋವಿಂದಗೌಡ ಪಾಟೀಲ್ PI ಮತ್ತು ಸಿಬ್ಬಂದಿಗಳಾದ ರವಿ ಮಾವರ್ಕರ್, ಗಿರೀಶ್, ಶಶಿಧರ್, ಸುರೇಶ ಮತ್ತು ಮಲ್ಲಿಕಾರ್ಜುನ ಥೈಕಾರ್ ಅವರೂ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

Related Articles

Back to top button