Belagavi NewsBelgaum NewsKannada NewsKarnataka NewsNational
*ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಗಂಡನ ಫಜೀತಿ: ಚಪ್ಪಲಿಯಿಂದ ಥಳಿಸಿದ ಪತ್ನಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಲಾಡ್ಜ್ ಒಂದರಲ್ಲಿ ವ್ಯಕ್ತಿ ಓರ್ವ ತನ್ನ ಲವರ್ ಜೊತೆ ಸಿಕ್ಕಿಬಿದ್ದ ಘಟನೆ ನಡೆದಿದ್ದು, ಪತಿಯನ್ನು ಪತ್ನಿ ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿದ್ದಾಳೆ.
ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಲಾಡ್ಜ್ ನಲ್ಲಿ ಅವಿನಾಶ್ ಭೋಸಲೆ ಎಂಬಾತ ಪರಸ್ತ್ರೀ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ವಿಷಯ ತಿಳಿದ ಆತನ ಪತ್ನಿ ಮಾವನ ಜೊತೆ ಲಾಡ್ಜ್ ಗೆ ಹೋಗಿ ಗಂಡನನ್ನು ಎಳೆದು ತಂದು ನಡು ರಸ್ತೆಯಲ್ಲೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಗಂಡ ಅವಿನಾಶ್ ಭೋಸಲೆ ಪತ್ನಿಗೆ ಆಕೆಯ ಮಾವ ಕೂಡ ಸಾಥ್ ನೀಡಿ ಥಳಿಸಿದ್ದಾನೆ.
ನಡು ರಸ್ತೆಯಲ್ಲೇ ಈ ಘಟನೆ ನಡೆದಿರುವದಿಂದ ನೂರಾರು ಜನರು ಜಮಾವಣೆಗೊಂಡಿದ್ದು, ಸದ್ಯ ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.


