*ಕರ್ನಾಟಕ ರಾಜ್ಯೋತ್ಸವ-2025: ಮಾಧ್ಯಮ ಪ್ರತಿನಿಧಿಗಳಿಗೆ ಸನ್ಮಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ 11 ಜನ ಮಾಧ್ಯಮ ಪ್ರತಿನಿಧಿಗಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲು ನಿರ್ಧರಿಸಲಾಗಿದೆ.
ಕನ್ನಡಪ್ರಭ ದಿನಪತ್ರಿಕೆಯ ಹಿರಿಯ ಉಪ ಸಂಪಾದಕರಾದ ಸದಾನಂದ ಮಜತಿ, ವಿಜಯವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಮಂಜುನಾಥ ಕೋಳಿಗುಡ್ಡ, ಕೆ.ಪಿ.ಎನ್ ಸಂಸ್ಥೆಯ ಛಾಯಾಗ್ರಾಹಕರಾದ ವೀರನಗೌಡ ಇನಾಮತಿ, ಟಿ.ವಿ.9 ಜಿಲ್ಲಾ ವರದಿಗಾರರಾದ ಸಹದೇವ ಮಾನೆ, ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರರಾದ ಅನಿಲ್ ಕಾಜಗಾರ, ಟಿ.ವಿ.9 ಸಂಸ್ಥೆಯ ಕ್ಯಾಮರಾಮನ್ ಪ್ರವೀಣ ಶಿಂಧೆ, ಟಿ.ವಿ.5 ಸಂಸ್ಥೆಯ ಕ್ಯಾಮರಾಮನ್ ರವಿ ಭೋವಿ, ಲೋಕಕ್ರಾಂತಿ ದಿನಪತ್ರಿಕೆಯ ಸಂಪಾದಕರಾದ ಹಿರೋಜಿ ಮಾವರಕರ, ಸಂಯುಕ್ತ ಕರ್ನಾಟಕ ದಿನಪತ್ರಿಕೆ ಚಿಕ್ಕೋಡಿ ವರದಿಗಾರರಾದ ಸಂಜೀವ ಕಾಂಬಳೆ, ವಿಜಯಕರ್ನಾಟಕ ದಿನಪತ್ರಿಕೆಯ ನಿಪ್ಪಾಣಿ ವರದಿಗಾರರಾದ ಗಜಾನನ ರಾಮನಕಟ್ಟಿ, ಪತ್ರಿಕಾ ವಿತರಕರಾದ ಶಂಕರ ಸುತಗಟ್ಟಿ.
1 ನವೆಂಬರ 2025 ರಂದು ಬೆಳಿಗ್ಗೆ 9.30 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಭಾಜನರಾದ ಮಾಧ್ಯಮ ಪ್ರತಿನಿಧಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯರುಗಳು ಸನ್ಮಾನಿಸಲಿದ್ದಾರೆ.
 
					 
				 
					 
					 
					 
					
 
					 
					 
					


