*ಗ್ರಾಮ ಪಂಚಾಯತ ಸಿಬ್ಬಂದಿಗಳ ಕುಂದುಕೊರತೆ ಆಲಿಸಿದ ಜಿ.ಪಂ.ಸಿ.ಇ.ಒ.ರಾಹುಲ ಶಿಂಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮ ಪಂಚಾಯತ ತೆರಿಗೆ ವಸೂಲಾತಿಯಲ್ಲಿ ಶೇ 40 ರಷ್ಟು ಅನುದಾನವನ್ನು ಗ್ರಾಮ ಪಂಚಾಯತಿ ಸಿಬ್ಬಂದಿಗಳ ವೇತನ ಖಾತೆಗೆ ಕಡ್ಡಾಯವಾಗಿ ಜಮೆ ಮಾಡುವುದು ಹಾಗೂ ಗ್ರಾಮ ಪಂಚಾಯತಿಗಳ ಆವರಣದಲ್ಲಿ ಪ್ರತಿ ದಿನ ಧ್ವಜಾರೋಹಣ ಮಾಡುವ ಸಿಬ್ಬಂದಿಗಳಿಗೆ ಗೌರವಧನ ಸಂದಾಯ ಮಾಡಬೇಕೆಂದು ಜಿ.ಪಂ.ಸಿ.ಇ.ಒ ರಾಹುಲ ಶಿಂಧೆ ಸೂಚನೆ ನೀಡಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಜರುಗಿದ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಹಾಗೂ ಸ್ವಚ್ಛವಾಹಿನಿಗಳ ಕುಂದುಕೊರತೆ ಆಲಿಸಲು ನಡೆದ ವಿಡಿಯೋ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯತ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಕಡ್ಡಾಯವಾಗಿ ವೇತನ ಪಾವತಿ ಮಾಡುವುದು. ಕರವಸೂಲಿಗಾರ ಹಾಗೂ ಕ್ಲರ್ಕ ಕಮ್ಮಾಟಾ ಎಂಟ್ರಿ ಆಪರೇಟ ರ್ಹುದ್ದೆಗಳು ಖಾಲಿ ಇದ್ದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ವಾಟರ್ಮನ್, ಸ್ವಚ್ಛತಗಾರ ಹಾಗೂ ಸಿಪಾಯಿಗಳಿಗೆ ನಿಯಮಾನುಸಾರ ಬಡ್ತಿ ನೀಡಲು ಅಧಿಕಾರಿಗಳಿಗೆ ಜಿ.ಪಂ. ಸಿ.ಇ ಒ ರವರು ನಿರ್ದೇಶನ ನೀಡಿದರು.
ಗ್ರಾಮ ಪಂಚಾಯತಿಗಳಲ್ಲಿ ಸಿಬ್ಬಂದಿಗಳು ಮರಣ ಮತ್ತು ನಿವೃತ್ತಿ ಹೊಂದಿದಲ್ಲಿ ಅವರ ಕುಟುಂಬದವರಿಗೆ ಮರಣ/ನಿವೃತ್ತಿ ಉಪದಾನ ಸಂದಾಯ ಮಾಡಲು ತಿಳಿಸಿದರು. ಗ್ರಾಮ ಪಂಚಾಯತಿಗಳಲ್ಲಿ ಮರಣ ಹೊಂದಿದ ಸಿಬ್ಬಂದಿಗಳ ವಾರಸುದಾರರಿಗೆ ಅನುಕಂಪ ಆಧಾರದ ಮೇಲೆ ನೇಮಕಾತಿ ಮಾಡಲು ಕೂಡಲೆ ಪ್ರಸ್ತಾವನೆಸಲ್ಲಿಸಲು ಜಿಲ್ಲೆಯ ಎಲ್ಲ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯತ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಪ್ರತಿ ಮನೆಯಿಂದ ಯೂಸರ್ಫಿ ಸಂಗ್ರಹಣೆಗೆಂದು ಗ್ರಾಮ ಪಂಚಾಯತ ಮತ್ತು ಒಕ್ಕೂಟದವರು ನಿರ್ಣಯಮಾಡಿಕೊಂಡ ಯೂಸರ್ಫಿ ಸಂಗ್ರಹಿಸುವಮೂಲಕ ಘನತ್ಯಾಜ್ಯ ವಿಲೇವಾರು ಮಾಡುವ ಮಹಿಳಾ ಒಕ್ಕೂಟದ ಚಾಲಕರು ಹಾಗೂ ಸ್ವಚ್ಛತಾಗರರಿಗೆ ಗೌರವಧನ ಪಾವತಿ ಮಾಡುವುದಕ್ಕೆ ಕ್ರಮ ಕೈಗೊಳ್ಳುವಂತೆ ಸೂಜಿಸಿದರು. ಅಲ್ಲದೇ ಸ್ವಚ್ಛವಾಹಿನಿಗೆ ಆಯ್ಕೆಯಾಗಿ ತರಬೇತಿ ಯಾಗದೇ ಇರುವ ಮಹಿಳೆಯರಿಗೆ ಗ್ರಾಮ ಪಂಚಾಯತಿಗಳು ತರಬೇತಿ ಆಯೋಜಿಸುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಸ ವಿಲೇವಾರಿಗೆ ಮೊದಲ ಆದ್ಯತೆ ನೀಡಿ ವೈಜ್ಞಾನಿಕವಾಗಿ ಕಸ ಸಂಗ್ರಹಣೆಮಾಡಿ ವಿಲೇವಾರಿ ಮಾಡಲು ಕ್ರಮವಹಿಸುವುದು ಮತ್ತು ಜಿಲ್ಲೆಯ ಎಲ್ಲ ತಾಲೂಕಾ ಪಂಚಾಯತ ಹಂತದಲ್ಲಿ ಪ್ರತಿ ತಿಂಗಳು ಗ್ರಾಮ ಪಂಚಾಯತಿಗಳ ಸಿಬ್ಬಂದಿ ಹಾಗೂ ಸ್ವಚ್ಛವಾಹಿನಿಗಳ ಕುಂದು ಕೊರತೆ ಸಭೆಗಳನ್ನು ಆಯೋಜಿಸಿ ವರದಿಯನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿಸಲು ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ, ಸಹಾಯಕ ಕಾರ್ಯದರ್ಶಿ ರಾಹುಲ ಕಾಂಬಳೆ, ಎಲ್ಲ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಬೆಳಗಾವಿ ಜಿಲ್ಲಾ ಸಮಿತಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ಸ್ಪರ್ಕ ಡಾಟಾ ಎಂಟ್ರಿ ಆಪರೇಟ ನೌಕಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರು, ಜಿಲ್ಲೆಯ ಎಲ್ಲ ತಾಲ್ಲೂಕು ಮಟ್ಟದ ಗ್ರಾಮ ಪಂಚಾಯತ ಸಿಬ್ಬಂದಿಗಳ ಅಧ್ಯಕ್ಷರು/ಪದಾಧಿಕಾರಿಗಳು ಹಾಗೂ ಜಿ.ಪಂ. & ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.



