
ಪ್ರಗತಿವಾಹಿನಿ ಸುದ್ದಿ: ಡಿಜಿಟಲ್ ಖಾತೆ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಧೂಪತಮಹಗಾಂವ್ ನಲ್ಲಿ ನಡೆದಿದೆ.
ಅನಿತಾ ರಾಠೋಡ್ ಲೋಕಾಯುಕ್ತ ಬಲೆಗೆ ಬಿದ್ದವರು. ಧೂಪತಮಹಗಾಂವ್ ಗ್ರಾಮ ಪಂಚಾಯಿತಿ ಪಿಡಿಒ. 12 ಸಾವಿರ ರೂಪಾಯಿ ಲಂಚದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ರಾಜಕುಮಾರ್ ಪಾಟೀಲ್ ಎಂಬುವವರು ತನ್ನ ನಿವೇಶನ ಸಂಖ್ಯೆಗೆ ಡಿಜಿಟಲ್ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಪಿಡಿಒ ಅನಿತಾ ರಾಠೋಡ್ ಲಂಚಕ್ಕೆ ಬೇದಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.




