Belagavi NewsBelgaum NewsKannada NewsKarnataka NewsPolitics

*ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಬೇಕು: ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬು ಬೆಳೆಗಾರರ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಬಾಳಪ್ಪ ಗುಡಗೆನಟ್ಟಿ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು.

ಬೆಳಗಾವಿ ಜಿಲ್ಲಾ ಆಡಳಿತ ಎದುರು ನಡೆದ ಪ್ರತಿಭಟನೆಯಲ್ಲಿ, ಕಬ್ಬು ಕಾರ್ಖಾನೆಗಳ ಮಾಲೀಕರು ಹಾಗೂ ಸರ್ಕಾರಗಳು ರೈತರ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದು ಆಗ್ರಹಿಸಲಾಯಿತು. ನಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮನವಿಯಲ್ಲಿ, ಕಬ್ಬು ಬೆಳೆಗಾರರಿಗೆ ಪ್ರತಿ ಟನ್ನಿಗೆ ₹3,500 ಕಬ್ಬು ಕಾರ್ಖಾನೆಗಳಿಂದ, ₹1,000 ರಾಜ್ಯ ಸರ್ಕಾರದಿಂದ ಹಾಗೂ ₹1,000 ಕೇಂದ್ರ ಸರ್ಕಾರದಿಂದ ಪರಿಹಾರ ರೂಪದಲ್ಲಿ ನೀಡುವಂತೆ ಒತ್ತಾಯಿಸಲಾಗಿದೆ. ಒಟ್ಟಾರೆ ಪ್ರತಿ ಟನ್ನಿಗೆ ₹5,000 ಪರಿಹಾರ ನೀಡಬೇಕು ಎಂದು ಯುವಸೇನೆ ಬೇಡಿಕೆ ಮುಂದಿಟ್ಟಿದೆ.

ಈ ಪ್ರತಿಭಟನೆಯಲ್ಲಿ   ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಸದಸ್ಯರು ಹಾಗೂ ರೈತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ, “ಕಬ್ಬು ಬೆಳೆಗಾರರಿಗೆ ನ್ಯಾಯ ನೀಡಿ”, “ರೈತರಿಗೆ ಬೆಂಬಲ ನೀಡಲಿ ಸರ್ಕಾರ” ಎಂಬ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

Home add -Advt

ಈ ಪ್ರತಿಭಟನೆ ಸಂದರ್ಭದಲ್ಲಿ ಬಾಳಪ್ಪ ಪಾಟೀಲ್, ಉಮೇಶ್ ಲಕ್ಕನ್ನವರ್, ಅಮಿತ್ ಸೂರ್ಯವಂಶಿ, ಲಕ್ಷ್ಮಣ್ ಲಮಾಣಿ, ಗಂಗರಾಜು ನಾಯಕ್, ರವಿ ರಾಠೋಡ್, ಅಪ್ಪು ಲಮಾಣಿ, ನಾಗರಾಜ್ ತಳವಾರ್, ಮಹಿಳಾ ಅಧ್ಯಕ್ಷ ನಿರ್ಮಲ ಪಾಟೀಲ್, ಕೃಷ್ಣ ಲಮಾಣಿ, ಗೋವಿಂದ ಕಾರಬಾರಿ, ರವಿ ಕಾರ್ಬಾರಿ, ಭೀಮರಾಯಿ ಗುಡಿಗೆನಟಿ, ಮಲ್ಲೇಶ್ ಪಾಟೀಲ್, ಅರ್ಜುನ್ ಪಟೇಲ್  ಇನ್ನುಳಿದ ಕನ್ನಡಿಗರು ಪದಾಧಿಕಾರಿಗಳು ಉಪಸ್ಥಿತರಿದ್ದರು‌

Related Articles

Back to top button